ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಬಸ್ ಶೆಲ್ಟರ್ ಮಿಸ್ಸಿಂಗ್ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿದ್ದಾರೆ.ಬಸ್ ಶೆಲ್ಟರ್ ಕಳ್ಳತನವಾಗಿರಲಿಲ್ಲ.ಇದನ್ನು ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆ ತೆರವುಗೊಳಿಸಿದ್ರು.ಸೈನ್ ಪೋಸ್ಟ್ ಕಂಪನಿಯವರು ಮಿಸ್ ಲೀಡ್ ದೂರು ನೀಡಿದ್ದಾರೆ.ದೂರಿನನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೇವು .ತನಿಖೆ ವೇಳೆ ಅಸಲಿ ಸತ್ಯ ಬಯಲಾಗಿದೆ.ಕಳೆದ ೨೫ ತಾರೀಖು ಶಿವಾಜಿನಗರ ಕಾರ್ಯಪಾಲಕ ಅಭಿಯಂತರರು ಇದನ್ನು ತೆರವುಗೊಳಿಸಿದ್ದರು.ಸದ್ಯ ಇದು ಸುಳ್ಳು ಕೇಸ್ ಎಂಬುದು ಪತ್ತೆಯಾಗಿದೆ.ಕಳಪೆ ಕಾಮಗಾರಿ ಹಿನ್ನೆಲೆ ಶೆಲ್ಟರ್ ತೆರವುಗೊಳಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ದಯಾನಂದ್ ಹೇಳಿದ್ದಾರೆ.