ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನರೊಟ್ಟಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಈ ವೇಳೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಪುತ್ರ ಭರತ್ ಬೊಮ್ಮಾಯಿ ಕೂಡ ಮತ ಚಲಾಯಿಸಿದ್ದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಸವರಾಜ ಬೊಮ್ಮಾಯಿ ಅವರು ಮತ ಚಲಾಯಿಸಿದ ಶಾಲೆಯ ಫೋಟೋವನ್ನು ವೈರಲ್ ಆಗಿದೆ. ಈ ಪೋಟೋದಲ್ಲಿ ಶಾಲೆ ಹಾಳು ಬಿದ್ದ ಕಟ್ಟಡದ ಹಾಗೇ ಕಾಣುತ್ತಿದ್ದು ಇದನ್ನು ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ಬಸವರಾಜ ಬೊಮ್ಮಾಯಿಗೆ ಹಲವು ಪ್ರಶ್ನೆ ಮಾಡುತ್ತಿದ್ದಾರೆ.
'ತಾನು ಮತ ಹಾಕುವ ಶಾಲೆಯನ್ನೇ ಅಭಿವೃದ್ಧಿ ಪಡಿಸಲಿಲ್ಲ ಕ್ಷೇತ್ರವನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಿರಬಹುದು ಎಂದು ಊಹಿಸಿ!
ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ನಿನ್ನ ಸಾಧನೆ ಏನು ಎಂಬುವುದನ್ನು ಈ ಫೋಟೋವೇ ಸಾಕ್ಷಿ!' ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.