Daily Horoscope
✕

ದನಗಳ ಜತೆ ತೆರಳಿದಾಗ ಅಂಥ ಘಟನೆ ನಡೆದೇ ಹೋಯ್ತು

Webdunia
ಶನಿವಾರ, 7 ಸೆಪ್ಟಂಬರ್ 2019 (18:14 IST)
ದನಗಳ ಜತೆ ತೆರಳಿದಾಗ ನಡೆಯಬಾರದ ಘಟನೆ ನಡೆದುಹೋಗಿದೆ.

ಮಂಡ್ಯ ಜಿಲ್ಲೆಯ ದೊಡ್ಡಗಾಡಿಗನಹಳ್ಳಿ ಗ್ರಾಮದ ತನ್ನ ಜಮೀನಿನ ಬಳಿ ಉಳುಮೆ ಮಾಡಿ ನಂತರ ದನಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದ ಯುವರೈತನೊಬ್ಬ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ದೊಡ್ಡಗಾಡಿಗನಹಳ್ಳಿ ಗ್ರಾಮದ  ರಂಗೇಗೌಡರ ಮಗ ಡಿ.ಆರ್.ಕಾರ್ತಿಕ್(23) ಮೃತ ಯುವ ರೈತನಾಗಿದ್ದಾನೆ.

ಕಾರ್ತೀಕ್ ಬೆಳಿಗ್ಗೆ 6 ಗಂಟೆಗೆ ತಮ್ಮ ದನಗಳೊಂದಿಗೆ  ಜಮೀನನ್ನು ಉಳುಮೆ ಮಾಡಲು ಹೋಗಿದ್ದಾನೆ. ಉಳುಮೆಯ ನಂತರ ದನಗಳಿಗೆ ನೀರು ಕುಡಿಸಿ ಮೈತೊಳೆಯುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹೀಗಂತ ಮೃತನ ತಂದೆ  ರಂಗೇಗೌಡ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕರಿಸಿರುವ ಪ್ರಭಾರ ಸಬ್ ಇನ್ಸ್ ಪೆಕ್ಟರ್  ಈರೇಗೌಡ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಶೋಕ್, ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಮೃತರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ಮೇಲೆ ಕದಿ ನೋಡೋಣ.. ರೈಲಿನ ಕಿಟಿಕಿಯಲ್ಲಿ ಕೈ ಹಾಕಿ ಕದಿಯಲೆತ್ನಿಸಿದ ಖದೀಮನಿಗೆ ಜನ ಹೇಗೆ ಪಾಠ ಕಲಿಸಿದ್ರು ನೋಡಿ Video

ಎಸ್‍ಐಆರ್‍ನಲ್ಲಿ ರಾಹುಲ್ ಗಾಂಧಿಗೆ ಸ್ಪಷ್ಟತೆಯೇ ಇಲ್ಲ: ಕೋಟ ಶ್ರೀನಿವಾಸ ಪೂಜಾರಿ

ಪುಟ್ಟ ಮಗುವಿನೊಂದಿಗೆ ರೈಲಿನಡಿಗೆ ಬೀಳುತ್ತಿದ್ದ ವ್ಯಕ್ತಿಯ ಪಾಲಿಗೆ ದೇವತೆಯಂತೆ ಬಂದವರು ಯಾರು ನೋಡಿ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕೇರಳ, ತೆಲಂಗಾಣದಲ್ಲಿ ಇವಿಎಂನಿಂದ ಗೆದ್ದ ನಿಮ್ಮ ಸರ್ಕಾರ ರಾಜೀನಾಮೆ ನೀಡಲಿ, ನಾವೂ ನೀಡುತ್ತೇವೆ: ರಾಹುಲ್ ಗಾಂಧಿಗೆ ಹಿಮಂತ ಸವಾಲು

ಮುಂದಿನ ಸುದ್ದಿ
Show comments