Select Your Language

Notifications

webdunia
webdunia
webdunia
webdunia

ಒಂದು ವರ್ಷದೊಳಗೆ ವಿಚ್ಚೇದನ ನೀಡಬಾರದೆಂಬ ನಿಯಮ ಕಡ್ಡಾಯವಲ್ಲ

ಒಂದು ವರ್ಷದೊಳಗೆ ವಿಚ್ಚೇದನ ನೀಡಬಾರದೆಂಬ ನಿಯಮ ಕಡ್ಡಾಯವಲ್ಲ
bangalore , ಶುಕ್ರವಾರ, 8 ಸೆಪ್ಟಂಬರ್ 2023 (18:29 IST)
ಮದುವೆಯಾದ ಒಂದು ವರ್ಷದ ಒಳಗೇ ವಿಚ್ಚೇದನ ಕೋರಲು ಯುವ ಜೋಡಿಯೊಂದಕ್ಕೆ ಕರ್ನಾಟಕ ಹೈಕೋರ್ಟ್  ಅನುಮತಿ ನೀಡಿದೆ. ಅಲ್ಲದೆ, ವಿವಾಹವಾದ ಒಂದು ವರ್ಷದ ಅವಧಿಯಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಬಾರದೆಂಬ ನಿಯಮ ಕಡ್ಡಾಯವೇನಲ್ಲ ಎಂದು ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ನ್ಯಾಯಾಲಯವು ವಿಚ್ಚೇದನ ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದು ಅರ್ಜಿ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ ಪಾಟೀಲ್ ಅವರು ವಿವಾಹವಾದ ಒಂದು ವರ್ಷದ ಅವಧಿಯಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಬಾರದೆಂಬ ನಿಯಮ ಕಡ್ಡಾಯವೇನಲ್ಲ ಎಂದು ಫೀಠ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಡ-ಮೈಸೂರು ಎಕ್ಸ್‌ಪ್ರೆಸ್‌ ರೈಲು ಬೆಳಗಾವಿಗೂ ವಿಸ್ತರಣೆ