ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆ ಆಯ್ತು, ಆದ್ರೆ ಈಗ ಪ್ರತಿಯೊಬ್ಬ ಜನಸಾಮಾನ್ಯರು ತಿನ್ನುವ ಅಕ್ಕಿ, ಕುಡಿಯುವ ಹಾಲು, ಮತ್ತಿತರ ಅಗತ್ಯ ವಸ್ತುಗಳ ದರ ಏರಿಕೆಯ ಬಿಸಿ ತಟ್ಟಿದ್ದು. ಅಕ್ಕಿಯ ದರದಲ್ಲಿ ಶೇ.10ರಷ್ಟು ದರ ಹೆಚ್ಚಳವಾಗಿದೆ. ಇತ್ತೀಚೆಗೆ ಅಕ್ಕಿಯನ್ನು ವಿದೇಶಗಳಿಗೆ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಇದ್ರಿಂದ ಹಣದುಬ್ಬರದ ಏರಿಕೆ, ದೇಶೀಯ ಉತ್ಪಾದನೆ ಕುಂಠಿತಗೊಂಡಿರುವುದು.ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವುದು. ಅಕ್ಕಿಗೆ ಪ್ರತ್ಯೇಕ ಜಿ.ಎಸ್.ಟಿ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಅಕ್ಕಿ ದರದಲ್ಲಿ ಕಳೆದ ಒಂದು ತಿಂಗಳಿಂದ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ಸೇರಿದಂತೆ ಇನ್ನಿತರ ಸ್ಟೀಮ್ ರೈಸ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.
ಇನ್ನು ಈ ಹಿಂದೆ ಕೇಂದ್ರ ಸರ್ಕಾರ ಶೇ.5ರಿಂದ 10ರಷ್ಟು ಅಕ್ಕಿಯ ವಿದೇಶಿ ರಫ್ತುಗೆ ಮಾತ್ರ ಅನುಮತಿ ನೀಡಿತ್ತು. ಆದರೆ ಈಗ ಶೇ.20ರಷ್ಟು ರಫ್ತಿಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿಬಾಸ್ಮತಿ ಸೇರಿದಂತೆ ಎಲ್ಲಾ ರೀತಿಯ ಅಕ್ಕಿಯ ಬೆಲೆಯಲ್ಲಿ ಪ್ರತಿ ಕೆ.ಜಿಗೆ 8ರಿಂದ 10ರೂ.ಗಳಷ್ಟು ಏರಿಕೆಯಾಗಿದೆ. ಅದರಲ್ಲೂ ಪಲಾವ್, ಬಿರಿಯಾನಿಯಂತಹ ಅಡುಗೆಗಳಿಗೆ ಯಥೇತ್ಛವಾಗಿ ಬಳಸುವ ಬಾಸ್ಮತಿ ಸ್ಟೀಮ್ ರೈಸ್‌ನ ಬೆಲೆ ಸಗಟು ದರದಲ್ಲಿಯೇ ಕೆ.ಜಿ.ಮೇಲೆ 10ರೂ. ಹೆಚ್ಚಳ ವಾಗಿದೆ.
ಕೇವಲ ಅಕ್ಕಿ ಮಾತ್ರವಲ್ಲದೇ, ಗೋಧಿ, ಬೇಳೆಕಾಳುಗಳು, ಮೊಟ್ಟೆಯ ದರದಲ್ಲೂ ಗಣನೀಯ ಏರಿಕೆಯಾಗಿದೆಯಂತೆ.
ಇನ್ನೂ ಕೆಲವು ತಿಂಗಳುಗಳ ಕಾಲ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆಯಂತೆಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಉತ್ಪಾದನೆ ಕಡಿಮೆ ಆಗಿತ್ತು. ಜತೆಗೆ ಮಳೆ,ಪ್ರವಾಹದಿಂದಲೂ ಉತ್ಪಾದನೆ ಕುಂಠಿತವಾಗಿತ್ತು. ಹೀಗಾಗಿ, ಬೆಲೆಯಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ಗ್ರೀನ್ ಸಿಗ್ನಲ್ ನೀಡಿರುವುದರಿಂದಬಾಸ್ಮತಿ, ಸೋನಾ ಮಸೂರಿ ಮತ್ತಿತರ ಅಕ್ಕಿಗಳ ದರ ಹೆಚ್ಚಳವಾಗಿದೆ ಅಂತ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸ್ತಿದಾರೆ.
ಅಕ್ಕಿ ಬೆಲೆ ಏರಿಕೆಗೆ ಕಾರಣವೇನು? ಅಂತ ನೋಡೋದಾದ್ರೆ
– ಅಕ್ಕಿ ರಫ್ತು ಹೆಚ್ಚಳ
– ಉತ್ಪಾದನಾ ವೆಚ್ಚ ಏರಿಕೆ
– ದೇಶೀಯ ಉತ್ಪಾದನೆ ಕುಸಿತ
– ರಫ್ತು ಬೇಡಿಕೆ ಹೆಚ್ಚಳ
– ಹಣದುಬ್ಬರದ ಸತತ ಏರಿಕೆ
ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಬಾಸ್ಮತಿ ಅಕ್ಕಿಯನ್ನು ಪಂಜಾಬ್, ಹರ್ಯಾಣ ರಾಜ್ಯಗಳಲ್ಲಿ ಬೆಳೆಯುತ್ತಾರೆ.ಉತ್ತರ ಭಾರತದಲ್ಲಿ ಬೆಳೆಯಲಾಗುವ ಬಾಸ್ಮತಿ ಅಕ್ಕಿ ಅತ್ಯುತ್ತಮ ಗುಣಮಟ್ಟದ್ದಾಗಿದೆ. ಹೀಗಾಗಿ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಧಿಕ ಬೇಡಿಕೆ ಇದ್ದು. ಇರಾಕ್, ಇರಾನ್, ಕುವೈತ್, ಬಹರೈನ್, ಒಮನ್, ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮತ್ತಿತರೆ ದೇಶಗಳಿಂದಲೂ ಹೆಚ್ಚು ಬೇಡಿಕೆ ಇರೋದ್ರಿಂದ ನಮ್ಮ ರಾಜ್ಯದ ಜನತೆಗೆ ಅಕ್ಕಿ ದರದ ಬರೆ ಬೀಳ್ತಿರೋದು ವಿಪರ್ಯಾಸ