ಬೆಂಗಳೂರಿನಲ್ಲಿ ಭಾನುವಾರ 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಕೊನೇನ ಅಗ್ರಹಾರ - ನಾಗವಾರ ನಮ್ಮ ಮೆಟ್ರೋ ಮಾರ್ಗದ ಬಳಿ ಹಾಕಲಾದ ಕೆಲವು ಪೈಪ್‌ಗಳ ನವೀಕರಣ ಮತ್ತು ಸ್ಥಳಾಂತರಿಸುವ ಕೆಲಸ,ಹೊಸ ಪೈಪ್‌ಗಳನ್ನು ನೀರು ಸರಬರಾಜು ಮಾರ್ಗದ ಜಾಲಕ್ಕೆ ಜೋಡಿಸುವ ಕೆಲಸವನ್ನೂ ಬಿಡಬ್ಲ್ಯುಎಸ್‌ಎಸ್‌ಬಿ ಕೈಗೆತ್ತಿಕೊಳ್ಳುವ ಕಾರಣ ಈ ಅಡಚಣೆ ಉಂಟಾಗಲಿದೆ.ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಶಾಂತಿನಗರ, ನೇತಾಜಿ ನಗರ, ಕೆಪಿ ಅಗ್ರಹಾರ, ಬಿನ್ನಿ ಲೇಔಟ್, ರಾಘವೇಂದ್ರ ಕಾಲನಿ, ಚಾಮರಾಜಪೇಟೆ, ಆದರ್ಶ ನಗರ, ಅಂಜನಪ್ಪ ಗಾರ್ಡನ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜ ನಗರ. , ಬಸವನಗುಡಿ , ಶಾಸ್ತ್ರಿ ನಗರ, ಎನ್‌ಆರ್ ಕಾಲನಿ, ಬನಶಂಕರಿ I ಹಂತ, ಇಸ್ರೋ ಲೇಔಟ್, ಶ್ರೀನಗರ, ಕುಮಾರಸ್ವಾಮಿ ಲೇಔಟ್‌ನ ಭಾಗಗಳು, ಶಾಂತಲಾ ನಗರ, ಶಾಂತಿನಗರ, ಆನೆಪಾಳ್ಯ, ಆಸ್ಟಿನ್ ಟೌನ್, ಈಜಿಪುರ, ವಿವೇಕನಗರ, ಅಶೋಕ್ ನಗರ, ರಿಚ್‌ಮಂಡ್ ಟೌನ್, ವಿಕ್ಟೋರಿಯಾ ಆಸ್ಪತ್ರೆ, ಡಾಮ್‌ಮನ್ ಆಸ್ಪತ್ರೆ, , HAL II ಹಂತ, ಅಮರಜ್ಯೋತಿ ಲೇಔಟ್, ಕೋಡಿಹಳ್ಳಿ, ಗಂಗಾಧರ ಚೆಟ್ಟಿ ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಗೌತಂಪುರ, ಕೆಆರ್ ಗಾರ್ಡನ್, ಕಲಾಸಿಪಾಳ್ಯ, ಜಯನಗರ ಭಾಗಗಳು, ತಿಲಕನಗರ, ಆಡುಗೋಡಿ, ಎಸ್‌ಜಿ ಪಾಳ್ಯ, ಬೃಂದಾವನ ನಗರ, ಮತ್ತು ಜೀವನ್ ಬಿಮಾ ನಗರ ಇಷ್ಟು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಯ ಉಂಟಾಗಲಿದೆ.