Select Your Language

Notifications

webdunia
webdunia
webdunia
webdunia

ಸೋಮವಾರದವರೆಗೂ ರೆಸಾರ್ಟ್‌ ಬಂಧನ!

ರೆಸಾರ್ಟ್‌ ಬಂಧನ

geetha

ಹೈದರಾಬಾದ್‌ , ಶನಿವಾರ, 3 ಫೆಬ್ರವರಿ 2024 (18:22 IST)
ಹೈದರಾಬಾದ್‌ : ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಚಂಪಿ ಸೊರೇನ್‌ ಸೋಮವಾರ ಸದನದಲ್ಲಿ ತಮ್ಮ ಬಲಾಬಲ ಪ್ರದರ್ಶಿಸಲಿರುವುದರಿಂದ ಅದೇ ದಿನದಂದು ಕಾಂಗ್ರೆಸ್‌ ಶಾಸಕರನ್ನು ನೇರವಾಗಿ ಕರೆತರಲಾಗುವುದು. ಸಧ್ಯಕ್ಕೆ ಜಾರ್ಖಂಡ್‌ ನಲ್ಲಿ ಜೆಎಂಎಂ -29, ಕಾಂಗ್ರೆಸ್‌ -16, ಆರ್‌ಜೆಡಿ-1 ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರ ನಡೆಸುತ್ತಿದೆ. ಬಿಜೆಪಿ 32 ಸ್ಥಾನಗಳನ್ನು ಹೊಂದಿದ್ದು, 41 ಸ್ಥಾನಗಳನ್ನು ಪಡೆದವರು ಸರ್ಕಾರ ರಚಿಸಬಹುದಾಗಿದೆ. ಬಿಜೆಪಿ  ಕೇವಲ 9 ಸ್ಥಾನ ಕಡಿಮೆ ಇರುವುದರಿಂದ ಕಾಂಗ್ರೆಸ್‌ ಮತ್ತು ಜೆಎಂಎಂ ಗೆ ಆಪರೇಷನ್‌ ಭೀತಿ ಎದುರಾಗಿದೆ. 

ಜಾರ್ಖಂಡ್‌ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿರುವ ಬೆನ್ನಲ್ಲೇ ಅಲ್ಲಿನ  ಜೆಎಂಎಂ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ ಶಾಸಕರ ಆಪರೇಷನ್‌ ಭೀತಿ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಹೈದರಾಬಾದ್‌ ಹೊರವಲಯದಲ್ಲಿರುವ ರೆಸಾರ್ಟ್‌ ನಲ್ಲಿ ಕಲೆಹಾಕಲಾಗಿದ್ದು, ಸೋಮವಾರದವರೆಗೂ ವಾಸ್ತವ್ಯ ಕಲ್ಪಿಸಲಾಗಿದೆ. ಅಕ್ರಮ ಹಣ ವರ್ಗವಣೆ ಆರೋಪದಡಿಯಲ್ಲಿ ಸಿಎಂ ಹೇಮಂತ್‌ ಸೊರೇನ್‌ರನ್ನು ಇ.ಡಿ ಬಂಧನಕ್ಕೊಳಪಡಿಸಿದ ಬಳಿಕ ಚಂಪಿ ಸೊರೇನ್‌ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದರು.
 


Share this Story:

Follow Webdunia kannada

ಮುಂದಿನ ಸುದ್ದಿ

ಸೈಕಲ್‌ ಓಡಿಸುತ್ತಿದ್ದ ಸೆಂಚುರಿ ಸೈಕ್ಲಿಸ್ಟ್‌ ಸಾವು