Daily Horoscope

Select Your Language

Notifications

webdunia
webdunia
webdunia
webdunia

ನನ್ನ ಸ್ವಾಮೀಜಿ ನಡುವಿನ ಸಂಬಂಧ ಭಕ್ತೆ, ಗುರುವಿನ ಸಂಬಂಧ

Basava Mruthyunjaya Swamiji Case
ಬಾಗಲಕೋಟೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಎಸಗಿದ್ದ ಸಂತ್ರಸ್ತ ಮಹಿಳೆ ಇದೀಗ ಉಲ್ಟಾ ಹೊಡೆದಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. 

ಈಚೆಗೆ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.  

ನಾನು ಶ್ರೀಗಳ ವಿರುದ್ಧ ದೂರು ನೀಡಿಲ್ಲ. ನನ್ನ ಮತ್ತು ಸ್ವಾಮೀಜಿ ಮೇಲಿರುವ ಆರೋಪಗಳೆಲ್ಲವೂ ಸುಳ್ಳು. ಇನ್ನೂ ನನ್ನ ಹೆಸರಿನಲ್ಲಿ ಯಾರೋ ದುಷ್ಕರ್ಮಿಗಳು ದೂರನ್ನು ನೀಡಿದ್ದಾರೆ. ನನ್ನ ಮೇಲೆ ಯಾವುದೇ ತರದ ಲೈಂಗಿಕ ದೌರ್ಜನ್ಯ ಆಗಿಲ್ಲ, ಶ್ರೀಗಳು ತನ್ನ ಜೊತೆಗೆ ಯಾವುದೇ ಅಸಭ್ಯ ವರ್ತನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಇನ್ನೂ ನಾವು ಶ್ರೀಗಳಿಗೆ ಕೆಟ್ಟ ಶಬ್ದದಿಂದ ಬೈದಿಲ್ಲ. ವಿಜಯಪುರದಲ್ಲಿ ನಡೆದ ಗಲಾಟೆ ಸಮಯದಲ್ಲಿ ನಾನು ಕೇವಲ ಮಾತಾಡಬೇಕು ಎಂದು ಕರೆದಿದ್ದೆ, ಆಗ ನನ್ನ ಸಂಬಂಧಿಯೋರ್ವ ಕೂಗಾಡಿದ್ದ ಅಷ್ಟೇ ಅದರ ಹೊರತಾಯೂ ಬೇರೇನೂ ಇಲ್ಲ ಎಂದರು. 

ಇನ್ನೂ ನಾನು ಶ್ರೀಗಳ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಹಣ ಕೇಳುವ ಪರಿಸ್ಥಿತಿಯೂ ಬಂದಿಲ್ಲ. ಇನ್ನೂ ನಮ್ಮಿಬ್ಬರ ಮಧ್ಯೆಯಿರುವುದು ಭಕ್ತೆ ಹಾಗೂ ಗುರುವಿನ ಸಂಬಂಧ ಅಷ್ಟೇ ಎಂದರು. 

ದೂರು ನೀಡಿರುವುದು ಯಾರು ಎಂಬುದು ನನಗೆ ಗೊತ್ತಿಲ್ಲ. ಅದೊಂದು ಸುಳ್ಳು ದೂರು, ಯಾರು ಕೂಡ ಅದನ್ನು ನಂಬಬೇಡಿ. ಸದ್ಯ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನದಲ್ಲಿ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು  ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಮೀಸಲಾತಿ ಗಿಮಿಕ್ ಎಂದ ಖರ್ಗೆ, ಕಾಂಗ್ರೆಸ್ ನಿಂದ ಮಹಿಳೆಯರಿಗೆ ಅಪಮಾನ ಎಂದ ವಿಜಯೇಂದ್ರ