Select Your Language

Notifications

webdunia
webdunia
webdunia
webdunia

ನಾಲ್ಕೈದು ಬಾರಿ ಶಾಸಕರಾದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ

Home Minister G Parameshwar
ಬೆಂಗಳೂರು: ಪಕ್ಷದ ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದ್ರಲ್ಲಿ ಯಾವುದೇ ತಪ್ಪಿಲ್ಲ, ಅದೇನು ಗ್ಯಾಬ್ಲಿಂಗ್ ಅಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. 

ಈ ವಿಚಾರದಲ್ಲಿ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡೂ ಮೂರು ಬಾರಿ ಶಾಸಕರಾಗು ಗೆದ್ದಿರುವವರು, ಸಚಿವರಾಗಲು ಸಮರ್ಥರಾದವರು. ಅವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಇದನ್ನು ಹೈಕಮಾಂಡ್‌ ತೀರ್ಮಾನವನ್ನು ಕೈಗೊಳ್ಳುತ್ತದೆಂದು ಹೇಳಿದರು.  

ಅದೇನು ಗ್ಯಾಂಬ್ಲಿಂಗ್ ಅಲ್ಲ. ಅವರಿಗೆ ಅರ್ಹತೆ ಇದೆ ಕೇಳ್ತಾರೆ. ನಾಯಕತ್ವ ವಿಚಾರ ಇರಲಿ, ಪುನಾರಚನೆ ಇರಲಿ ಹೈಕಮಾಂಡ್ ಮಾತ್ರವೇ ತೀರ್ಮಾನ ಮಾಡಬೇಕೆಂದರು. 

ಇನ್ನೂ ರಾಜ್ಯದ ಈ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸಿದ್ದು, ಯಾವ ಸಂದರ್ಭದಲ್ಲಿ ಏನ್‌ ಮಾಡಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. 

ಇನ್ನೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ಆಕಾಂಕ್ಷಿನಾ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗ ಪುನಾರಚನೆ ಚರ್ಚೆ ಆಗ್ತಿದೆ ಅಷ್ಟೇ. ಅಧ್ಯಕ್ಷ ಸ್ಥಾನ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಅದೆಲ್ಲವನ್ನೂ  ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಸಿಡೆಂಟ್ ಆದ ಟ್ರಕ್ ನಲ್ಲಿ ಸಿಲುಕಿದ ಚಾಲಕ, ಕಣ್ಣೆದುರೇ ಬೆಂಕಿಗೆ ಆಹುತಿಯಾದ ಭೀಕರ ಕ್ಷಣ Video