Webdunia - Bharat's app for daily news and videos

Install App

ಮಲೆನಾಡ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ

Webdunia
ಶನಿವಾರ, 7 ಜನವರಿ 2023 (18:29 IST)
ಮಲೆನಾಡು ಭಾಗದಲ್ಲಿ ಮಾನವ-ಪ್ರಾಣ  ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೃಷಿಕರು, ಬೆಳೆಗಾರರು ಜೀವ ಭಯದಲ್ಲೇ ದಿನ ದೂಡಬೇಕಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಪ್ರಾಣ ಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
ಕಾಡಾನೆಗಳ ನಿರಂತರ ದಾಳಿಯ ನಡುವೆ ಇತ್ತೀಚೆಗೆ ಕಾಡು ಕೋಣಗಳ ಹಾವಳಿಯೂ ವಿಪರೀತವಾಗಿದ್ದು, ಜೀವ ಹಾನಿ ಜೊತೆಗೆ ಅಪಾರ ಪ್ರಮಾಣದ ಬೆಳೆಯನ್ನೂ ಹಾನಿಗೀಡುಮಾಡುತ್ತಿದೆ. ಕೆಲವೇ ತಿಂಗಳ ಹಿಂದೆ ಕಳಸಾ ಸಮೀಪ ಕಾಡುಕೊಣದ ದಾಳಿಯಿಂದ ತೋಟದ ಮಾಲೀಕರೊಬ್ಬರು ಮೃತ ಪಟ್ಟಿದ್ದ ಘಟನೆ ಮಾಸುವ ಮುನ್ನವೇ ನಿನ್ನೆಯಷ್ಟೇ ಮಲ್ಲಂದೂರು ಸಮೀಪ ನಿಡಗೋಡು ಗ್ರಾಮದಲ್ಲಿ ಮನೋಜ್ ಎಂಬ ಯುವಕನ ಮೇಲೆ ಕಾಡು ಕೋಣ ದಾಳಿ ನಡೆಸಿದ್ದು, ಆತ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದಿದ್ದಾರೆ.
ಕಾಡಾನೆಗಳ ದಾಳಿಯಿಂದ ಈಗಾಗಲೇ ಸಾಕಷ್ಟು ಸಾವು ನೋವು, ಕಷ್ಟ ನಷ್ಟಗಳನ್ನು ಅನುಭವಿಸಿರುವ ಬೆನ್ನಲ್ಲೇ ಕಾಡು ಕೋಣಗಳ ಹಾವಳಿ ತೀವ್ರಗೊಳ್ಳುತ್ತಿರುವುದು ಮಲೆನಾಡಿಗರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣ ಸಬೇಕಿದೆ ಎಂದಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಈಗ ಯುವ ಅಧಿಕಾರಿಗಳ ತಂಡ ಇದ್ದು, ಪ್ರಾಣ ಗಳ ಹಾವಳಿ ತಡೆಗೆ ಚುರುಕಿನ ಕಾರ್ಯಾಚರಣೆ ನಡೆಸಬೇಕು. ಪಟಾಕಿಗಳನ್ನು ಸಿಡಿಸಿ ಪ್ರಾಣ ಗಳನ್ನು ಬೆದರಿಸುವಂತಹ ಸವಕಲು ಕ್ರಮವನ್ನು ಕೈಬಿಟ್ಟು ಅವುಗಳನ್ನು ಅರಣ್ಯಕ್ಕೆ ಸ್ಥಳಾಂತರಿಸಿ ಮತ್ತೆ ಅವು ಹೊರಕ್ಕೆ ಬಾರದಂತೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅರಣ್ಯದಲ್ಲಿ ಆಹಾರದ ಕೊರತೆ ಉಂಟಾಗಿರುವುದೇ ಆನೆಗಳು, ಕಾಡುಕೋಣಗಳು ಇನ್ನಿತರೆ ಪ್ರಾಣ ಗಳು ತೋಟಗಳು, ಹೊಲ ಗದ್ದೆಗಳತ್ತ ನುಗ್ಗಿ ಪ್ರಾಣ ಹಾನಿ, ಬೆಳೆ ಹಾನಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಅರಣ್ಯಕ್ಕೆ ಸ್ಥಳಾಂತರಿಸಿ ಕಾಡಂಚಿನ ಪ್ರದೇಶದಲ್ಲಿ ಟ್ರಂಚ್ ನಿರ್ಮಿಸಿ ಅರಣ್ಯ ಪ್ರದೇಶದಲ್ಲಿ ಪ್ರಾಣ ಗಳಿಗೆ ಆಹಾರಕ್ಕೆ ಅಗತ್ಯವಿರುವ ಹಣ ್ಣನ ಗಿಡಗಳು ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 
ವನ್ಯ ಪ್ರಾಣ ಗಳ ಹಾವಳಿ ತಡೆಗೆ ವಿವಿಧ ರೀತಿಯ ಬೇಲಿಗಳನ್ನು ಅಳವಡಿಸುವ ಕುರಿತು ಸರ್ಕಾರ ಕೇವಲ ಭರವಸೆಯನ್ನಷ್ಟೇ ನೀಡುತ್ತಿದೆ. ಬಜೆಟ್ ಅಧಿವೇಶನದಲ್ಲೂ ಪ್ರಸ್ತಾಪಿಸಿ ೧೦೦ ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಹೇಳಿ ಹಲವಾರು ತಿಂಗಳೇ ಕಳೆದಿವೆ ಆದರೂ ಇನ್ನೂ ಈ ಸಂಬAಧ ಯಾವುದೇ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಕಾಡುಕೋಣ ದಾಳಿಯಿಂದ ಗಾಯಗೊಂಡಿರುವ ಯುವಕ ಮನೋಜ್‌ನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವ ಜೊತೆಗೆ ಅವರ ಕುಟುಂಬ ನಿರ್ವಹಣೆಗೆ ಸೂಕ್ತ ಪರಿಹಾರವನ್ನೂ ನೀಡಬೇಕು ಹಾಗೆಯೇ ಕಳಸಾದಲ್ಲಿ ಕಾಡುಕೋಣ ದಾಳಿಯಿಂದ ಮೃತ ಪಟ್ಟ ಕೃಷಿಕ ವ್ಯಕ್ತಿಯ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರುವ ಅವರು, ಜನರ ಆಕ್ರೋಶ ಭುಗಿಲೇಳುವ ಮುನ್ನ ಅರಣ್ಯ ಇಲಾಖೆ ಕಾಡು ಪ್ರಾಣ  ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಜೆಡಿಎಸ್‌ನಿಂದಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments