Publish Date: Thu, 01 Aug 2019 (17:46 IST)
Updated Date: Thu, 01 Aug 2019 (17:49 IST)
ಐಎಂಎ ಬಹುಕೋಟಿ ಹಗರಣದ ತನಿಖೆ ನಡೆಯುತ್ತಿರುವಾಗಲೇ, ಇತ್ತ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು ಇದರಿಂದ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಕೋಲಾರದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಿಂದ ಜನರಿಗೆ ಹಣ ವಂಚನೆ ನಡೆದಿದೆ ಅಂತ ಆರೋಪ ಕೇಳಿಬಂದಿದೆ.
ಬಂಗಾರಪೇಟೆ ಪಟ್ಟಣದ ಷಣ್ಮುಗ ಫೈನಾನ್ಸ್ ಹಾಗೂ ಚಿಟ್ ಫಂಡ್ ಕಂಪನಿಯಿಂದ ಸಾವಿರಾರು ಜನರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಒಂದು ವರ್ಷದ ಹಿಂದೆಯೇ ಈ ಕಂಪನಿ ವಂಚನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಹೂಡಿಕೆಯ ಹಣ ವಾಪಸು ಕೊಡಿಸುವಂತೆ ಕೆಜಿಎಫ್ ಎಸ್. ಪಿ. ಮೊಹಮ್ಮದ್ ಸುಜೀತ್ ಗೆ ಮನವಿ ಮಾಡಲಾಗಿತ್ತು.
ಪ್ರತ್ಯೇಕವಾಗಿ ದೂರು ನೀಡುವಂತೆ ವಂಚನೆಗೆ ಒಳಗಾದವರಿಗೆ ಎಸ್ ಪಿ ಸೂಚನೆ ನೀಡಿದ್ರು.
ಸರ್ಕಾರಿ ನೌಕರರು ಸೇರಿದಂತೆ ಸಾವಿರಾರು ಜನರಿಂದ ಷುಣ್ಮುಗ ಕಂಪನಿಯಲ್ಲಿ ಹಣ ತೊಡಗಿಸುವಿಕೆ ಮಾಡಲಾಗಿದೆ.
ತೆರಿಗೆ ಇಲಾಖೆಯ ಭಯದಿಂದ ದೂರು ಕೊಡಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಬಂಗಾರಪೇಟೆ ಕೋರ್ಟ್ ಗೆ ಹಣ ಕಳೆದುಕೊಂಡವರು ಮೊರೆ ಹೋಗಿದ್ದಾರೆ.