Publish Date: Mon, 15 Jul 2019 (17:21 IST)
Updated Date: Mon, 15 Jul 2019 (17:25 IST)
ಬಹುಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ಐಎಂಎ ಸಂಸ್ಥೆಯ ಮನ್ಸೂರ್ ಖಾನ್ 24 ಗಂಟೆಯೊಳಗೆ ಭಾರತಕ್ಕೆ ಬರೋದಾಗಿ ಹೇಳಿಕೊಂಡಿದ್ದಾನೆ.
ಭಾರತದ ಪೊಲೀಸರು ರಕ್ಷಣೆ ನೀಡಿದರೆ ಮಾತ್ರ ವಾಪಸ್ ಬರೋದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಅನಾರೋಗ್ಯದ ಕಾರಣದಿಂದ ನಾನು ರೆಸ್ಟ್ ನಲ್ಲಿದ್ದೆ. ಈಗ ಗುಣಮುಖನಾಗಿದ್ದೇನೆ. ಹೀಗಂತ ಮನ್ಸೂರ್ ಖಾನ್ ಹೇಳಿಕೆ ನೀಡಿರೋ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಭಾರತ ಬಿಟ್ಟು ಬಂದು ತಪ್ಪು ಮಾಡಿದೆ ಎಂದಿರುವ ಆತ, ರಾಜಕಾರಣಿಗಳ ಒತ್ತಡದಿಂದ ದೇಶ ಬಿಡಬೇಕಾಗಿ ಬಂದಿತು ಎಂದಿದ್ದಾನೆ.
ಪ್ರಕರಣದ ತನಿಖೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ನಾನು ಅಧಿಕಾರಿಗಳಿಗೆ ಕೊಡುತ್ತೇನೆ. ನಾನು ಮತ್ತೆ ವಾಪಸ್ ಬರುತ್ತಿರುವುದು ಹಣ ವಾಪಾಸ್ ಕೊಡಲಿಕ್ಕೆ ಎಂದು ಅಳುತ್ತಾ ಮನ್ಸೂರ್ ಖಾನ್ ಹೇಳಿದ್ದಾನೆ.