Publish Date: Wed, 04 May 2022 (20:00 IST)
Updated Date: Wed, 04 May 2022 (20:02 IST)
ಡೆನ್ಮಾರ್ಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೋಪೆನ್ ಹೇಗನ್ ನಲ್ಲಿರುವ ಭಾರತೀಯ ಮತ್ತು ಡ್ಯಾನಿಶ್ ಸಮುದಾಯಗಳೊಂದಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಡೋಲು ಬಾರಿಸುವುದರಲ್ಲಿ ಭಾರತೀಯ ಕಲಾವಿದರು ಮಗ್ನರಾಗಿದ್ದರು.ಇದನ್ನು ಗಮನಿಸಿದ ಪ್ರಧಾನಿ ಮೋದಿ ತಾವು ಏಕೆ ಒಂದು ಪ್ರಯತ್ನ ಮಾಡಬಾರದು ಎಂದು ಭಾವಿಸಿದವರೇ ನೇರವಾಗಿ ಕಲಾವಿದರ ಬಳಿಗೆ ಹೋಗಿ ಡೋಲನ್ನು ಪಡೆದು ಬಾರಿಸಲು ಆರಂಭಿಸಿದರು. ಅವರ ಈ ತಾಳಕ್ಕೆ ಭಾರತೀಯ ಕಲಾವಿದರು ಹೆಜ್ಜೆ ಹಾಕುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಭಾರತೀಯ ಮತ್ತು ಡ್ಯಾನಿಶ್ ಪ್ರಜೆಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಭಾರತೀಯ ಮೂಲದ ಸಮುದಾಯಗಳೊಂದಿಗೆ ಚರ್ಚೆ ನಡೆಸಿದರು ಮತ್ತು ಭಾರತೀಯ ವೈವಿಧ್ಯಮಯ ಸಂಸ್ಕೃತಿಯನ್ನು ಮತ್ತಷ್ಟು ಶಕ್ತಿಯುತಗೊಳಿಸುವಂತೆ ಕರೆ ನೀಡಿದರು.