Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ದುಬಾರಿಯಾಗಿದ್ದ ಟೊಮೆಟೊ ಬೆಲೆ ದಿಢೀರ್ ಕುಸಿತ

webdunia
ಸೋಮವಾರ, 29 ನವೆಂಬರ್ 2021 (20:22 IST)
ಸೇಬಿಗಿಂತ ದುಬಾರಿಯಾಗಿದ್ದ ಟೊಮೆಟೊ ಬೆಲೆ ದಿಢೀರ್‌ ಕುಸಿತ ಕಂಡಿದೆ. 100-120 ರೂ.‌ಇದ್ದ ಟೊಮೆಟೊ ದರ 40-50 ರೂ.ಗೆ ಕುಸಿದಿದೆ. ದರ ಏರಿಕೆಯಾಗುತ್ತಿದ್ದಂತೆ, ಮಾರುಕಟ್ಟೆಗೆ ಟೊಮೆಟೊ ಬರುವುದು ಹೆಚ್ಚಳವಾಗಿದೆ.
 
ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ರೈತರು ಹೊಲದಲ್ಲಿದ್ದ ಟೊಮೆಟೊ ಕೊಯ್ಲು ಮಾಡಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಹೆಚ್ಚಳವಾಗಿದೆ. ಅಲ್ಲದೇ ಆಂಧ್ರಪ್ರದೇಶ, ತಮಿಳುನಾಡು ಮತ್ತು ನಾಸಿಕ್‌ನಿಂದಲೂ ರಾಜ್ಯದ ಮಾರುಕಟ್ಟೆಗೆ ಟೊಮೆಟೊ ಬಂದಿದೆ. ಇದರಿಂದಾಗಿ 100 ರ ಗಡಿ ದಾಟಿದ್ದ‌ ಟೊಮೊಟೊ ದರ 50 ರೂ. ಕಡಿಮೆಗೆ‌ ಕುಸಿದಿದೆ. ನಿರಂತರ ಮಳೆ ಇಂದಾಗಿ ಟೊಮೆಟೊ ಬೆಳೆಗೆ ತೀವ್ರ ಹಾನಿಯಾಗಿತ್ತು. ಇದರಿಂದಾಗಿ ಮಾರುಕಟ್ಟೆಗೆ ಬರುವ ಟೊಮೊಟೊ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿತ್ತು.
 
 
ತರಕಾರಿ
ಟೊಮೆಟೊ-40-50 ರೂ.
ಬೆಳ್ಳುಳ್ಳಿ- 126 ರೂ.
ದಪ್ಪ ಮೆಣಸಿನಕಾಯಿ-124 ರೂ.
ಹಸಿ ಮೆಣಸಿನಕಾಯಿ- 58ರೂ.
ಕ್ಯಾರೆಟ್- 94 ರೂ.
ಹುರುಳಿ ಕಾಯಿ(ಬೀನ್ಸ್)- 87 ರೂ.ಈರುಳ್ಳಿ- 51ರೂ.
ಆಲೂಗಡ್ಡೆ- 45 ರೂ.
ಮೂಲಂಗಿ- 75 ರೂ.
ಬದನೆಕಾಯಿ- 110 ರೂ.
 
ಸೊಪ್ಪು
ಕೊತ್ತಂಬರಿ ಸೊಪ್ಪು- 114 ರೂ.ಕೊತ್ತಂಬರಿ ನಾಟಿ- 127 ರೂ.ಮೆಂತ್ಯ ಸೊಪ್ಪು-128ರೂ.ಪಾಲಕ್ ಸೊಪ್ಪು- 107 ರೂ.ಸಬ್ಬಕ್ಕಿ ಸೊಪ್ಪು- 70 ರೂ.ಕರಿಬೇವು- 67 ರೂ.ದಂಟಿನ ಸೊಪ್ಪು- 127ರೂ.
 
ತೆಂಗಿನ ಕಾಯಿ
32 ರೂ( ದಪ್ಪ)
28 ರೂ( ಮಧ್ಯಮ)
22 ರೂ( ಸಣ್ಣ)
16 ರೂ( ಅತಿ ಸಣ್ಣ)

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

12 ದೇಶಗಳಲ್ಲಿ ಕಂಡುಬಂದ ಹೊಸ ರೂಪಾಂತರಿ ಒಮಿಕ್ರೋನ್ ವೈರಸ್