Select Your Language

Notifications

webdunia
webdunia
webdunia
webdunia

ಇತಿಹಾಸ ಸೃಷ್ಟಿಸಿದ ರೇಷ್ಮೆ ಗೂಡಿನ ಬೆಲೆ

ಇತಿಹಾಸ ಸೃಷ್ಟಿಸಿದ ರೇಷ್ಮೆ ಗೂಡಿನ ಬೆಲೆ
bangalore , ಮಂಗಳವಾರ, 8 ಮಾರ್ಚ್ 2022 (20:03 IST)
ಕಳೆದ ವರ್ಷ ಸುರಿದ ಧಾರಾಕರ ಮಹಾ ಮಳೆಗೆ, ಜಿಲ್ಲೆಯ ಕೆಲವೆಡೆ ರೇಷ್ಮೆ ತೋಟಗಳು ಜಲಾವೃತವಾಗಿ ಬೆಳೆ ನಾಶವಾಗಿದೆ. ಇನ್ನೊಂದೆಡೆ ಚೀನಾ ರೇಷ್ಮೆ ಆಮದಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ ಕಾರಣ ಸ್ಥಳಿಯ ರೇಷ್ಮೆ ಬೆಳೆಗಾರರಿಗೆ ಭಾರಿ ಡಿಮ್ಯಾಂಡ್ ಬಂದಿದೆ.ಕಷ್ಟ ಪಟ್ಟು ರೇಷ್ಮೆ ಗೂಡು ಬೆಳೆಯುವ ರೈತರಿಗೆ ಯಾವಾಗಲೂ ಉತ್ತಮ ಬೆಲೆ ಸಿಗ್ತಿಲ್ಲ ಅಂತ ಹಿಂದೆ ಪ್ರತಿಭಟನೆ ಧರಣಿ ಮುಷ್ಕರ ಮಾಡ್ತಿದ್ರು, ಆದ್ರೆ ಈಗ 1 ಕೆ.ಜಿ. ರೇಷ್ಮೆ ಗೂಡಿನ ಬೆಲೆ ಸಾವಿರ ರೂಪಾಯಿ ಗಡಿ ದಾಟಿದೆ! ಇದ್ರಿಂದ ರೇಷ್ಮೆ ಬೆಳೆದ ರೈತರು ಪುಲ್ ಖುಷ್ ಆಗಿದ್ದು, ಎರಡೂ ಕೈಗಳಲ್ಲಿ ಜಣ ಜಣ ಕಾಂಚಾಣ ಎಣಿಸ್ತಿದ್ದಾರೆ (Silk Market, Sidlaghatta). ಈ ಕುರಿತು ಒಂದು ವರದಿ ಇದೆ ಓದಿ.
 
ಅತ್ತುತ್ತಮ ರೇಷ್ಮೆ ಬೆಳೆಗೆ ಖ್ಯಾತಿಯಾಗಿರೊ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಈಗ ರೇಷ್ಮೆ ಗೂಡಿನ ಧಾರಣೆ ಕಂಡು ಕನಸೋ ನನಸೋ ಅಂತಾ ಕೆಲಕಾಲ ಅವಕ್ಕಾಗುತ್ತಿದ್ದಾರೆ. ಇತಿಹಾಸದಲ್ಲಿ ಕಂಡು ಕೇಳರಿಯದ ದುಬಾರಿ ಬೆಲೆ ರೇಷ್ಮೆ ಗೂಡಿಗೆ ಬಂದಿದೆ. ಇನ್ನೂ ರೇಷ್ಮೆ ಗೂಡು ವಹಿವಾಟಿಗೆ ಖ್ಯಾತಿಯಾಗಿರೊ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸರಾಸರಿ ಕೆ.ಜಿ ರೇಷ್ಮೆ ಗೂಡಿಗೆ 850 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿ ವರೆಗೂ ಬೆಲೆ ಬಂದಿದೆ ಎನ್ನುತ್ತಾರೆ ನರಸಿಂಹಮೂರ್ತಿ, ಸಹಾಯಕ ನಿರ್ದೇಶಕ, ಸರ್ಕಾರಿ ರೇಷ್ಮೆ ಗೂಡು ಮಾರ್ಕೆಟ್, ಶಿಡ್ಲಘಟ್ಟ.
ಉತ್ತಮ ಬೆಲೆ ಇದ್ರೆ ಇರೊ ಬರೊ ಜಮೀನಿನಲ್ಲಿ ರೇಷ್ಮೆ ಬೆಳೆಯುತ್ತೇವೆ, ಉತ್ತಮ ಧಾರಣೆಯಿಂದ ಸಂತೋಷವಾಗಿದೆ ಅನ್ನುತ್ತಿದ್ದಾರೆ.
 
ಕಳೆದ ವರ್ಷ ಸುರಿದ ಧಾರಾಕರ ಮಹಾ ಮಳೆಗೆ, ಜಿಲ್ಲೆಯ ಕೆಲವೆಡೆ ರೇಷ್ಮೆ ತೋಟಗಳು ಜಲಾವೃತವಾಗಿ ಬೆಳೆ ನಾಶವಾಗಿದೆ. ಇನ್ನೊಂದೆಡೆ ಚೀನಾ ರೇಷ್ಮೆ ಆಮದಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ ಕಾರಣ ಸ್ಥಳಿಯ ರೇಷ್ಮೆ ಬೆಳೆಗಾರರಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಇದೆಲ್ಲದರ ಪರಿಣಾಮ ನಿರೀಕ್ಷೆಯಷ್ಟು ರೇಷ್ಮೆ ಗೂಡು ದೊರೆಯದ ಕಾರಣ, ರೇಷ್ಮೆ ಉದ್ಯಮಿಗಳು ಕೇಳಿದಷ್ಟು ಹಣ ಕೊಟ್ಟು ರೇಷ್ಮೆ ಗೂಡು ಖರೀದಿ ಮಾಡ್ತಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನ್​ ಮೇಲೆ ರಷ್ಯಾ ಭೀಕರ ದಾಳಿ; ಸಾವಿನ ಮನೆಯಾದ ಉಕ್ರೇನ್