Publish Date: Sat, 15 Sep 2018 (18:13 IST)
Updated Date: Sat, 15 Sep 2018 (18:15 IST)
ಕುಂದಾನಗರಿಗೆ ಬೆಳಗಾವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಭೇಟಿ ನೀಡಿದ್ದರು.
ಬೆಳಗಾವಿಯ ಜಿಐಟಿ ಕಾಲೇಜ್ ಮೈದಾನದಲ್ಲಿ ಕೆ.ಎಲ್.ಎಸ್.ಕಾನೂನು ಮಹಾವಿದ್ಯಾಲಯದ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಯುವಜನತೆಯ ಕ್ರಾಂತಿ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರಿಂದ ದೇಶಕ್ಕೆ ಲಾಭ ಆಗಲಿದೆ ಎಂದು ಹೇಳಿದರು.
ಬೆಳಗಾವಿ ಪಾವಿತ್ರ್ಯವನ್ನು ಕಾಪಾಡಿಕೊಂಡು ಬಂದಿದೆ. 1892ರಲ್ಲಿ ಸ್ವಾಮಿ ವಿವೇಕಾನಂದರೂ ಇಲ್ಲಿಗೆ ಭೇಟಿ ನೀಡಿದ್ದರು ಎಂದು ಸ್ಮರಿಸಿದರು. ಕುಂದಾನಗರಿಯಿಂದಲೇ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಗಣೇಶ ಚತುರ್ಥಿ ಆಚರಣೆಗೆ ನಾಂದಿ ಹಾಡಿದ್ದರು. ಈ ನಗರ ಶೈಕ್ಷಣಿಕವಾಗಿಯೂ ಹೆಸರು ಮಾಡಿದೆ ಎಂದು ಬಣ್ಣಿಸಿದರು.