Select Your Language

Notifications

webdunia
webdunia
webdunia
webdunia

ಕೈಗಾರಿಕಾ ಪ್ರದೇಶಕ್ಕೆ ಕೇಂದ್ರ ನೀತಿ ಆಯೋಗದ ಸದಸ್ಯ ಭೇಟಿ

ಕೈಗಾರಿಕಾ ಪ್ರದೇಶಕ್ಕೆ ಕೇಂದ್ರ ನೀತಿ ಆಯೋಗದ ಸದಸ್ಯ ಭೇಟಿ
ನೆಲಮಂಗಲ , ಗುರುವಾರ, 13 ಸೆಪ್ಟಂಬರ್ 2018 (17:46 IST)
ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಇ ಪರಿಸರ ಕಾರ್ಖಾನೆಗೆ ಕೇಂದ್ರ ನೀತಿ ಆಯೋಗದ ಸದಸ್ಯ ಭೇಟಿ ನೀಡಿದ್ದರು.

ಸೂಕ್ತರೀತಿ ಇ ತ್ಯಾಜ್ಯ  ಸಂಸ್ಕರಣೆ ನಡೆದಾಗ ಮಾತ್ರ ಪರಿಸರ ಮಾಲಿನ್ಯ ತಡೆಗಟ್ಟಬಹುದು ಎಂದು ಕೇಂದ್ರ ನೀತಿ ಆಯೋಗದ ಸದಸ್ಯ ಹೇಳಿದ್ದಾರೆ. ಇ ತ್ಯಾಜ್ಯ  ಸಂಸ್ಕರಣೆ ನಡೆದಾಗ ಮಾತ್ರ ಪರಿಸರ ಮಾಲಿನ್ಯ ತಡೆಗಟ್ಟಬಹುದು ಎಂದು ಕೇಂದ್ರ ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಸಾರಸ್ವತ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಇ ಪರಿಸರ ಕಾರ್ಖಾನೆಗೆ ಭೇಟಿ ನೀಡಿ ಇ ತ್ಯಾಜ್ಯ ವಿಲೇವಾರಿ ಘಟಕ  ವೀಕ್ಷಿಸಿದರು.  ಇನ್ನೂ ಪರಿಸರ ಅಸಮತೋಲನ ಕಳೆದುಕೊಳ್ಳುತ್ತಿರುವ ಈ ವೇಗದ ಯುಗದಲ್ಲಿ ಹಸಿ ಕಸ, ಒಣ ಕಸ ವಿಂಗಡಣೆ ಜೊತೆಗೆ ಇ ತ್ಯಾಜ್ಯಗಳಾದ ಕಂಪ್ಯೂಟರ್ ಬಿಡಿಭಾಗಗಳು, ಕೇಬಲ್ ವೈರ್ ಗಳು, ಖನಿಜಗಳ ಅದಿರುಗಳು, ಬ್ಯಾಟರಿಗಳು ಸೇರಿದಂತೆ ಇತರೆ ತ್ಯಾಜ್ಯಗಳನ್ನು ವಿಂಗಡಿಸಿದಾಗ ವಾತಾವರಣ ಶುದ್ಧ ವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಯವರ ಕಲ್ಪನೆಯ ನಗರಗಳ ಅದಿರು ಸಂಸ್ಕರಣ ಮತ್ತು ತ್ಯಾಜ್ಯ ಘಟಕ ನೂತನ ಮಾದರಿಯ ಘಟಕ ಅನುಕೂಲಕರ ಎಂದರು. ಇದೇ ವೇಳೆಯಲ್ಲಿ ಘಟಕದ ನೂತನ ವಿಭಾಗವನ್ನು ಡಾ.ಸಾರಸ್ವತ್ ಉದ್ಘಾಟಿಸಿದರು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಸೆ.22 ರಂದು ಮೇಯರ್ - ಉಪ ಮೇಯರ್ ಚುನಾವಣೆ