Select Your Language

Notifications

webdunia
webdunia
webdunia
webdunia

ವಿದೇಶಕ್ಕೆ ಸಾಗಿಸಲು ಸಂಗ್ರಹಿಸಿಟ್ಟ ರಕ್ತ ಚಂದನವನ್ನು ವಶಕ್ಕೆ ಪಡೆದ ಪೊಲೀಸರು

ವಿದೇಶಕ್ಕೆ ಸಾಗಿಸಲು ಸಂಗ್ರಹಿಸಿಟ್ಟ ರಕ್ತ ಚಂದನವನ್ನು ವಶಕ್ಕೆ ಪಡೆದ ಪೊಲೀಸರು
ಮಂಗಳೂರು , ಶುಕ್ರವಾರ, 10 ಜನವರಿ 2020 (11:01 IST)
ಮಂಗಳೂರು : ವಿದೇಶಕ್ಕೆ ಸಾಗಿಸಲು ಸಂಗ್ರಹಿಸಿಟ್ಟ 2 ಕೋಟಿ ಮೌಲ್ಯದ ರಕ್ತ ಚಂದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಥಾಯ್ಲೆಂಡ್ ಗೆ ಸಾಗಿಸಲು ಬೈಕಂಪಾಡಿಯ ಗೋದಾಮಿನಲ್ಲಿ 2 ಕೋಟಿ ಮೌಲ್ಯದ 4 ಟನ್ ರಕ್ತಚಂದನದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉತ್ತರ ಉಪವಿಭಾಗದ ಪೊಲೀಸರು ಗೋದಾಮಿನ ಮೇಲೆ ದಾಳಿ ನಡೆಸಿ ರಕ್ತ ಚಂದನವನ್ನುವಶಕ್ಕೆ ಪಡೆದಿದ್ದಾರೆ.


ಅಲ್ಲದೇ ಈ ಪ್ರಕರಣದ ಆರೋಪಿಗಳಾದ  ಉಳ್ಳಾಲದ ತಬ್ರೇಜ್, ರೋಹಿತ್ ಸೇರಿದಂತೆ ಮೂವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ರನ್ನು ಭೇಟಿ ಮಾಡಿದ ಬಿಜೆಪಿ ಸಂಸದ