Select Your Language

Notifications

webdunia
webdunia
webdunia
webdunia

ವಿದ್ಯುತ್ ಇಲ್ಲದೆ ಪರದಾಡಿದ ಸುಳ್ಯದ ಜನತೆ

ವಿದ್ಯುತ್ ಇಲ್ಲದೆ ಪರದಾಡಿದ ಸುಳ್ಯದ ಜನತೆ
ಮಂಗಳೂರು , ಭಾನುವಾರ, 17 ಜುಲೈ 2022 (10:53 IST)
ಮಂಗಳೂರು : ಇಂಧನ ಸಚಿವ ಸುನಿಲ್ ಕುಮಾರ್ ಉಸ್ತುವಾರಿಯಾಗಿರುವ ಜಿಲ್ಲೆಯ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರ ಅವರ ಕ್ಷೇತ್ರ ಸುಳ್ಯದ ವಿದ್ಯುತ್ ಸಮಸ್ಯೆ ನಿರಂತರ ಎರಡನೇ ದಿನವೂ ಮುಂದುವರಿದಿದೆ.

ಶನಿವಾರ ದಿನಪೂರ್ತಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶನಿವಾರ ದಿನಪೂರ್ತಿ ವಿದ್ಯುತ್ ನಾಪತ್ತೆಯಾಗಿತ್ತು. ರಾತ್ರಿಯೂ ವಿದ್ಯುತ್ ಇಲ್ಲದೆ ಜನರು ಕತ್ತಲಲ್ಲಿ ಕಳೆಯುವಂತಾಗಿದೆ. ರಾತ್ರಿ ಒಂಭತ್ತು ಗಂಟೆಯಾದರೂ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿಲ್ಲ. ಆನೆಗುಂಡಿಯಲ್ಲಿ ಮರ ಮುರಿದು ಬಿದ್ದ ಕಾರಣ ಮೈನ್ ಲೈನ್ ವಿದ್ಯುತ್ ಸರಬರಾಜು ಇಲ್ಲದೆ ಸಮಸ್ಯೆ ಆಗಿದೆ.

ಮೈನ್ ಲೈನ್ ಚಾರ್ಜ್ ಮಾಡಲಾಗಿದೆ. ನಗರ ವ್ಯಾಪ್ತಿಯ ಫೀಡರ್ನಲ್ಲಿ ಸಮಸ್ಯೆ ಇದೆಯಾ ಎಂದು ಚೆಕ್ ಮಾಡ್ತಾ ಇದ್ದೇವೆ ಎಂದು ಸುಳ್ಯದ ಮೆಸ್ಕಾಂ ಕಚೇರಿ ಸಿಬ್ಬಂದಿ ಹೇಳಿದ್ದಾರೆ. ನಿರಂತರ ಎರಡನೇ ದಿನ ವಿದ್ಯುತ್ ಕಡಿತಗೊಂಡು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರವೂ ದಿನಪೂರ್ತಿ ಕರೆಂಟ್ ಇರಲಿಲ್ಲ.

ರಾತ್ರಿ ಒಂಭತ್ತು ಗಂಟೆಯ ಬಳಿಕ ವಿದ್ಯುತ್ ಸಂಪರ್ಕ ನೀಡಿದರೂ ಇಂದು ಬೆಳಗ್ಗಿನಿಂದ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಇಲ್ಲದೆ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗು ಹುಟ್ಟಿದ್ದಕ್ಕೆ ಆ್ಯಸಿಡ್ ಕುಡಿಸಿ ಹತ್ಯೆ!