ಕೊಪ್ಪಳ : ಕರ್ನಾಟಕದಲ್ಲಿ ಒಂದು ವೋಟಿಗೆ ಎರಡು ಸರಕಾರ ಸ್ಕೀಮ್ ಜಾರಿಗೆ ತರುತ್ತಿದ್ದೇವೆ. ಸಾಲಮನ್ನಾ ಹೆಸರಲ್ಲಿ ನೋಟಿಸ್ ಕೊಡುವ ಸರ್ಕಾರವನ್ನ ಬೀಳಿಸಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.
ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ನಡೆದ ಶಕ್ತಿ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದೇಟಿಗೆ ಎರಡು ಹಕ್ಕಿಯನ್ನ ಹೊಡೆಯಲು ಕರೆ ನೀಡಿದರು. ಅಲ್ಲದೆ ನೀವು ಒಂದು ಮತ ಹಾಕಿದ್ರೆ ಎರಡು ಸರ್ಕಾರ ಬರುತ್ತದೆ. ನೀವು ಒಂದು ಮತ ಹಾಕಿದ್ರೆ ಡೈರೆಕ್ಟ್ ಮೋದಿ ಸರಕಾರ ಸಿಗತ್ತದೆ. ಇನ್ನೊಂದು ವಿಧಾನಸಭೆಯಲ್ಲಿ ನಮ್ಮ ಸರಕಾರ ಸಿಗತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇವರ ಭಕ್ತರಾಗಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಭಕ್ತ. ರಾಹುಲ್ ಗಾಂಧಿ ಪಂಚೆ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋದ್ರೆ ಜೋಕರ್ ಹೋದಂಗೆ ಆಗುತ್ತದೆ. ಗಂಡ ಇದ್ರೂ ಪ್ರಿಯಾಂಕಾ ಗಾಂಧಿ ಹಣೆ ಮೇಲೆ ಕುಂಕುಮ ಇರಲಿಲ್ಲ. ಆರು ತಿಂಗಳ ಹಿಂದಿನ ಫೋಟೋ ನೋಡಿ ಕುಂಕುಮ ಇರಲಿಲ್ಲ. ಇದೀಗ ಎಲೆಕ್ಷನ್ ಗಾಗಿ ಹಣೆ ಮೇಲಿ ತಿಲಕ ಕಾಣ್ತಿದೆ ಎಂದ ಅವರು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.