Publish Date: Tue, 06 Jun 2023 (16:15 IST)
Updated Date: Tue, 06 Jun 2023 (14:21 IST)
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. ಜೀರೋ ಟಾಲರೆನ್ಸ್ ಜೋನ್ನಲ್ಲಿ ಸಚಿವೆ ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ. ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಎಡಕ್ಕೆ ತಿರುವು ಇಲ್ಲದಿದ್ದರೂ ಎಡಕ್ಕೆ ತಿರುವು ತೆಗೆದುಕೊಂಡ ವಾಹನ ಚಾಲಕ, ಏಕಾಏಕಿ ರೇಸ್ ಕೋರ್ಸ್ ರಸ್ತೆಗೆ ತೆರಳಿದ್ದಾನೆ. ಮೊದಲನೆಯದಾಗಿ ಸಿಗ್ನಲ್ ಜಂಪ್ ಮಾಡಲಾಗಿದ್ದು, ಎರಡನೆಯದಾಗಿ ಸೈರನ್ ಹಾಕಿಕೊಂಡು ವಾಹನ ಸವಾರಿ ಮಾಡಲಾಗಿದೆ. ಸಚಿವರ ದರ್ಪ ಕ್ಯಾಮೆರಾ ಕಣ್ಣಿನಲ್ಲಿ ಸರೆಯಾಗಿದೆ. ಶನಿವಾರ ನಡೆದ ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ.