Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಉಲ್ಲಂಘಿಸಿದ್ರೆ ಕೇಸ್ ಬೀಳುತ್ತೆ ಎಂದ ಸಚಿವ

ಲಾಕ್ ಡೌನ್ ಉಲ್ಲಂಘಿಸಿದ್ರೆ ಕೇಸ್ ಬೀಳುತ್ತೆ ಎಂದ ಸಚಿವ
ಹುಬ್ಬಳ್ಳಿ , ಶುಕ್ರವಾರ, 27 ಮಾರ್ಚ್ 2020 (19:16 IST)
ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಈ ವೇಳೆಯಲ್ಲಿ ಸಾರ್ವಜನಿಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇಲ್ಲದೇ ಹೋದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಹೇಳಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್ ಈ ಹೇಳಿಕೆ ನೀಡಿದ್ದಾರೆ. ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸಲಾಗುತ್ತಿರುವ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು. ಅಲ್ಲದೇ ಈಗಾಗಲೇ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಜನರು ಅಗತ್ಯ ವಸ್ತುಗಳ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಎಲ್ಲ ವಸ್ತುಗಳು ಸಿಗುತ್ತವೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ಅವಕಾಶ ಕೊಟ್ಟಿದೆ. 180 ವ್ಯಾಪಾರಿಗಳು ವ್ಯಾಪಾರ ನಡೆಸಿದ್ದಾರೆ. ಆದರೂ ಸಹಿತ ಜನ ಸೇರುತ್ತಿದ್ದು ಈ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳನ್ನು ಆಯಾ ವಾರ್ಡ್ ಗಳಲ್ಲೇ ಜನರಿಗೆ ತಳ್ಳುವ ಗಾಡಿ, ಚಕ್ಕಡಿ ಮುಂತಾದ ವಾಹನಗಳ ಮೂಲಕ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲಾಗುವುದು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದಾವಣಗೆರೆಯಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್