Publish Date: Fri, 28 Dec 2018 (17:19 IST)
Updated Date: Fri, 28 Dec 2018 (17:21 IST)
ವಿರೋಧ ಪಕ್ಷ ಇರೋದೆ ಕೆದಕಿ-ಕೆದಕಿ ಏನಾದ್ರು ಹೇಳೋಕೆ. ಅವರು ಏನೇ ಹೇಳಿದ್ರು ನಮ್ಮ ಸರ್ಕಾರ ಭದ್ರವಾಗಿದೆ ಅಂತ ಸಚಿವರೊಬ್ಬರು ಹೇಳಿದ್ದಾರೆ.
ರಮೇಶ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಬೆಳಗಾವಿಯಲ್ಲಿ ಅವ್ರು ಕಾಂಗ್ರೆಸ್ ಕಟ್ಟಿ ಆಳಿದೋರು. ಅವರು ಕಾಂಗ್ರೆಸ್ ಬಿಡ್ತಾರೆ ಅನ್ನೋದು ಶುದ್ಧ ಸುಳ್ಳು ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬೆಟ್ಟಗೆರೆ ಗ್ರಾಮದಲ್ಲಿ ಮಾತನಾಡಿದ ಅವ್ರು, ಬಸವರಾಜ್ ಹೊರಟ್ಟಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವಿಚಾರವಾಗಿ ಮಾತಾನಾಡಿ, ಅವರು ಕೂಡ ಹಿರಿಯ ರಾಜಕಾರಣಿ. ಅನುಭವಿ, ಮೇಧಾವಿ ಅವರಿಗೆ ಜೆಡಿಎಸ್ ನವರು ಸಚಿವ ಸ್ಥಾನ ನೀಡಬೇಕು ಎಂದ್ರು. ಇನ್ನು ಖಾತೆ ಹಂಚಿಕೆ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ.
ಪರಮೇಶ್ವರ್‍ರನ್ನೂ ಕೇಳಿಯೇ ಖಾತೆ ಹಂಚಿಕೆ ಮಾಡಿರೋದು ಎಂದರು. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದರು.