Select Your Language

Notifications

webdunia
webdunia
webdunia
webdunia

ಮನೆಮನೆಗೆ ಮದ್ಯ ಡೆಲಿವರಿ ಬಗ್ಗೆ ಯೂಟರ್ನ್ ಹೊಡೆದ ಅಬಕಾರಿ ಸಚಿವ

ಮನೆಮನೆಗೆ ಮದ್ಯ ಡೆಲಿವರಿ ಬಗ್ಗೆ ಯೂಟರ್ನ್ ಹೊಡೆದ  ಅಬಕಾರಿ ಸಚಿವ
ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2019 (13:18 IST)
ಬೆಂಗಳೂರು : ಮನೆಮನೆಗೆ ಮದ್ಯ ಡೆಲಿವರಿ ಮಾಡುವ ಯೋಜನೆಯ ಬಗ್ಗೆ ಮಾತನಾಡಿದ ಅಬಕಾರಿ ಇಲಾಖೆ ಸಚಿವ ಎಚ್​ ನಾಗೇಶ್ ಅವರು ಇದೀಗ ಯುಟರ್ನ್ ಹೊಡೆದಿದ್ದಾರೆ.




ಸಚಿವ ನಾಗೇಶ್ ಅವರು, ‘ಕೆಲವು ಕಡೆ ಮದ್ಯದ ಅಂಗಡಿ ದೂರ ಇರುತ್ತೆ. ಕೆಲವು ಕಡೆ ಮದ್ಯದ ಅಂಗಡಿಗಳೇ ಇರಲ್ಲ ಹೀಗಾಗಿ ಈ ಸಮಸ್ಯೆಗೆ ಪರಿಹಾರಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಮುಂದಾಗಿದ್ದು, ಮನೆ ಬಾಗಿಲಿಗೆ ಮದ್ಯ ಪೂರೈಸೋ ಚಿಂತನೆ ಕೂಡ ಇಲಾಖೆ ಮುಂದಿದೆ ಎಂದು ಹೇಳಿದ್ದರು. ಆದರೆ ನಾಗೇಶ್ ಅವರ ಈ ಹೇಳಿಕೆಯಿಂದ ಕೆಂಡಾಮಂಡಲರಾದ ಸಿಎಂ ಯಡಿಯೂರಪ್ಪ ನಾಗೇಶ್​ಗೆ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.


ಆದ್ದರಿಂದ ಇದೀಗ ಈ ವಿಚಾರದಲ್ಲಿ ಉಲ್ಟಾ ಹೊಡೆದ ಸಚಿವ ನಾಗೇಶ್, ಮನೆಮನೆಗೆ ಮದ್ಯಕ್ಕೆ ನಾನು ಅವಕಾಶ ನೀಡಲ್ಲ. ಇಂಥಾ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಹೆಣ್ಣು ಮಕ್ಕಳಿಗೆ ನೋವು ಕೊಡುವ ಯಾವ ಕೆಲಸವನ್ನೂ ಮಾಡಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿ. ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್