Select Your Language

Notifications

webdunia
webdunia
webdunia
webdunia

ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ!

ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ!
ಬೆಂಗಳೂರು , ಶುಕ್ರವಾರ, 9 ಜೂನ್ 2023 (09:24 IST)
ಬೆಂಗಳೂರು : ಯುವತಿ ಮೇಲೆ ಸ್ನೇಹಿತರಿಂದ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಯುವತಿ ಮೇಲೆ ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
 
ಈ ಘಟನೆ ಜೂನ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಿರಿನಗರ ಪೊಲೀಸರು ಸದ್ಯ ಪುರುಷೋತ್ತಮ್ ಹಾಗು ಚೇತನ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ಮೊಬೈಲ್ ಕೊಡುತ್ತೇನೆಂದು ಪುರುಷೋತ್ತಮ್ , ತನ್ನ ಪ್ರೇಯಸಿಯನ್ನು ಪುಸಲಾಯಿಸಿ ರೂಮ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.

ಪುರುಷೋತ್ತಮ್ ಹಾಗೂ ಯುವತಿ ಮೂಲತಃ ಇಬ್ಬರೂ ತುಮಕೂರು ಜಿಲ್ಲೆ ಕೊರಟಗೆರೆ ಮೂಲದವರಾಗಿದ್ದು, ಕಳೆದ 1 ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವಾರ ಅಷ್ಟೇ ಪುರುಷೋತ್ತಮ್ ಪ್ರೇಯಸಿಯನ್ನು ಭೇಟಿಯಾಗಿ ಮೊಬೈಲ್ ಪಡೆದುಕೊಂಡಿದ್ದ. ಬಳಿಕ 2 ದಿನಗಳ ಹಿಂದೆ ಯುವತಿ ಪುರುಷೋತ್ತಮ್ ಗೆ ಕರೆ ಮಾಡಿ ಮೊಬೈಲ್ ಕೇಳಿದ್ದಳು.

ಸರಿ ಮೆಜೆಸ್ಟಿಕ್ಗೆ ಬಾ ಮೊಬೈಲ್ ಕೊಡುತ್ತೇನೆ ಎಂದಿದ್ದ. ಅದರಂತೆ ಯುವತಿ ಜೂನ್ 6ರಂದು ಬೆಂಗಳೂರಿನ ಮೆಜೆಸ್ಟಿಕ್ಗೆ ಬಂದಿದ್ದಳು. ನಂತರ ಗಿರಿನಗರದ ಈರಣ್ಣಗುಡ್ಡೆಯ ಸ್ನೇಹಿತನ ರೂಮ್ಗೆ ಕರೆದೊಯ್ದಿದ್ದ. ಈ ವೇಳೆ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕೆಂದು ಯುವತಿ ಹೇಳಿದ್ದಾಳೆ. ಆದ್ರೆ, ಪುರುಷೋತ್ತಮ್ ಮೊಬೈಲ್ ನೀಡದೆ ಸತಾಯಿಸಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನಂತರ ರೂಮ್ಗೆ ಬಂದಿದ್ದ ಸ್ನೇಹಿತ ಚೇತನ್ ಸಹ ಯುವತಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಯುವತಿ ಚೀರಾಟ ಕೇಳಿ ಅಕಪಕ್ಕದ ಮನೆಯುವರು ಜಮಾವಣೆಗೊಂಡು ಗಿರಿನಗರ ಠಾಣೆ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೀಲ್ಸ್ ಮಾಡಿದ್ದಕ್ಕೆ ಪತ್ನಿಗೆ ನಿಜವಾಗಿಯೂ ತಲಾಖ್ ನೀಡಿದ!