Publish Date: Thu, 08 Jun 2023 (21:12 IST)
Updated Date: Thu, 08 Jun 2023 (19:20 IST)
ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿದ ಯುವತಿ ನನ್ನ ಮೊಬೈಲ್ ವಾಪಸ್ ಕೊಡು ಅಂತ ತಿಳಿಸಿದ್ದಳು. ಈ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ,ನಿನ್ನ ಮೊಬೈಲ್ ಕೊಡ್ತಿನಿ ಅಂತ ಆರೋಪಿ ಪುರುಷೋತ್ತಮ ಹೇಳಿದ್ದಾನೆ. ಮೊನ್ನೆ 6 ನೇ ತಾರೀಖು ಬೆಂಗಳೂರಿನ ಮೆಜೆಸ್ಟಿಕ್ ಗೆ ಯುವತಿ ಬಂದಿದ್ದು,ಪ್ರಿಯಕರನಿಗೆ ಕರೆ ಮಾಡಿದ್ದಾಳೆ. ಇನ್ನು ಯುವತಿಯನ್ನ ಗರಿನಗರದ ಈರಣ್ಣಗುಡ್ಡೆಯ ಬಳಿ ಇರುವ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದಾನೆ ಈ ವೇಳೆ ಯುವತಿ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಅಂತ ಕೇಳಿಕೊಂಡಿದ್ದಾಳೆ ಆದ್ರೆ ಆರೋಪಿ ಮಾತ್ರ ಬಿಲ್ಕುಲ್ ಒಪ್ಪದೆ ಇವತ್ತು ಇಲ್ಲೆ ಇರು ಅಂತ ಹೇಳಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಷ್ಟೆ ಅಲ್ಲದೆ ನಂತರ ತನ್ನ ಸ್ನೇಹಿತ ಚೇತನ್ ಕರೆಸಿದ್ದಾನೆ, ಆದರೆ ಯುವತಿ ವಿರೋಧ ವ್ಯಕ್ತಪಡಿಸಿದಾಗ ಇಬ್ಬರು ಸೇರಿ ರೇಪ್ ಮಾಡಿದ್ದಾರೆ.ಇನ್ನು ಯುವತಿಯ ಚೀರಾಟಕ್ಕೆ ಅಕ್ಕಪಕ್ಕದ ಮೆನೆಯವರು ಬಂದಿದ್ದು, ಕೂಡಲೇ ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಯುವತಿಯನ್ನ ರಕ್ಷಣೆ ಮಾಡಿ,ಆರೋಪಿಗಳಾದ ಚೇತನ್ ಹಾಗು ಪುರುಷೋತ್ತಮ್ ರನ್ನ ಗಿರಿನಗರ ಪೊಲೀಸರು ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ