Select Your Language

Notifications

webdunia
webdunia
webdunia
webdunia

ವಿದ್ಯುತ್‌ ತಂತಿಯ ಮೇಲೆಯೇ ಕುಸಿದು ಬಿದ್ದ ಲೈನ್‌ ಮ್ಯಾನ್‌

ವಿದ್ಯುತ್‌ ತಂತಿ
ತುಮಕೂರು :ಲೈನ್‌ ಮ್ಯಾನ್‌ ಇಮ್ರಾನ್‌ ದುರಸ್ಥಿಗಾಗಿ ಕಂಬವೇರಿದ್ದ ವೇಳೆ ಅಸ್ವಸ್ಥತೆಯಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಸುದೈವವಶಾತ್‌ ವಿದ್ಯುತ್‌ ತಂತಿಯ ಮೇಲೆಯೇ ಕುಸಿದು ಬಿದ್ದಿದ್ದರು. ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಕೂಡಲೇ ಕಂಬವೇರಿದ ಸ್ಥಳೀಯರು ಇಮ್ರಾನ್‌ ರನ್ನು ಕೆಳಗಿಳಿಸಿ ಗುಬ್ಬಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿದ್ಯುತ್‌ ಕಂಬದ ದುರಸ್ಥಿಗಾಗಿ ತೆರಳಿದ್ದ ಲೈನ್‌ ಮ್ಯಾನ್‌ ಒಬ್ಬರು ಅಸ್ವಸ್ಥತೆಯಿಂದಾಗಿ ವಿದ್ಯುತ್‌ ತಂತಿಯ ಮೇಲೇಯೇ ಕುಸಿದು ಬಿದ್ದಿರುವ ಘಟನೆ ಗುಬ್ಬಿ ತಾಲೂಕಿನ ಇಡಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಸ್ಥಳೀಯರು ಕೂಡಲೇ ಸಮಯಪ್ರಜ್ಞೆ ಮೆರೆದು ಕಂಬವೇರಿ ಲೈನ್‌ ಮ್ಯಾನ್‌ ರಕ್ಷಣೆ ಮಾಡಿದ್ದಾರೆ.  ಇಮ್ರಾನ್‌ ಅಪಾಯದಿಂದ ಪಾರಾಗಿದ್ದು, ಸಿಎಸ್‌ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸೇರ್ಪಡೆಯಾಗಲಿರುವ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ