Select Your Language

Notifications

webdunia
webdunia
webdunia
webdunia

ಬಕಾಸುರನ ಬೆಟ್ಟದಲ್ಲಿ ಜನರ ಜೀವಕ್ಕೆ ಕಂಟಕ

ಬಕಾಸುರನ ಬೆಟ್ಟದಲ್ಲಿ ಜನರ ಜೀವಕ್ಕೆ ಕಂಟಕ
ಚಿಕ್ಕಬಳ್ಳಾಪುರ , ಸೋಮವಾರ, 1 ಜೂನ್ 2020 (15:56 IST)
ಬಕಾಸುರನ ಬೆಟ್ಟದಲ್ಲಿ ಪದೇ ಪದೇ ಕಾಣಿಸಿಕೊಂಡು ಜನರ ಜೀವನಕ್ಕೆ ಎರವಾಗಿದ್ದ ಕಂಟಕ ಈಗ ದೂರ ಆಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರದ ಬಕಾಸುರನ ಬೆಟ್ಟದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಬೋನಿಗೆ ಬಿದ್ದ ಘಟನೆ  ನಡೆದಿದೆ.

ಬೋನಿಗೆ ಬಿದ್ದ ಚಿರತೆ ಕೈವಾರದ ಬಕಾಸುರನ ಬೆಟ್ಟದಲ್ಲಿ ಹಲವಾರು ಬಾರಿ ಪ್ರತ್ಯಕ್ಷವಾಗಿತ್ತು. ಇದರಿಂದ ಸುತ್ತಮುತ್ತಲ ಜನರು ಆತಂಕಕ್ಕೆ ಒಳಗಾಗಿದ್ದರು. ಚಿರತೆ ಕಳೆದ ವಾರದ ಹಿಂದೆ ಹಸುವನ್ನು ಕೊಂದು ತಿಂದಿದ್ದು, ಗ್ರಾಮಸ್ಥರಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಈ ಹಿನ್ನೆಲೆಯಲ್ಲಿ  ಅರಣ್ಯ ಅಧಿಕಾರಿಗಳು ಕೈವಾರ ಬೆಟ್ಟದ ಹಲವೆಡೆ ಬೋನನ್ನು ಅಳವಡಿಸಿದ್ದರು. ಕೈವಾರದ ಬಕಾಸುರನ ಬೆಟ್ಟದಲ್ಲಿ ಇಟ್ಟಿದ್ದ ಬೋನುಗಳ ಪೈಕಿ ಒಂದರಲ್ಲಿ‌ ರಾತ್ರಿ ಚಿರತೆ  ಬಿದ್ದಿದೆ.  ತಕ್ಷಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಹಿಡಿದು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರಕಾರದ ನಡೆ ಬಗ್ಗೆ ಬಿಜೆಪಿ ಸಚಿವ ಹೇಳಿದ್ದೇನು?