Select Your Language

Notifications

webdunia
webdunia
webdunia
webdunia

ಲೈಬ್ರರಿ ಇದ್ರು ಜನರ ಉಪಯೋಗಕ್ಕಿಲ್ಲ

ಲೈಬ್ರರಿ ಇದ್ರು ಜನರ ಉಪಯೋಗಕ್ಕಿಲ್ಲ
bangalore , ಬುಧವಾರ, 8 ಸೆಪ್ಟಂಬರ್ 2021 (19:24 IST)
ಬೆಂಗಳೂರು:-ಸಸ್ಯಕಾಶಿ ಲಾಲ್ ಬಾಗ್ ಸಿಲಿಕಾನ್ ಸಿಟಿ ಜನರ ನೆಚ್ಚಿನ ತಾಣ. ವಿಶ್ವ ವಿಖ್ಯಾತಿ ಪಡೆದಿರುವ ಲಾಲ್ ಬಾಗ್ ಗೆ ಸವಿರಾರು ಜನ ಪ್ರತಿನಿತ್ಯ ಬರ್ತಾರೆ ಜನರ ಅನುಕೂಲಕ್ಕಾಗಿ ಒಂದು  ಹೈಟೆಕ್ ಗ್ರಂಥಾಲಯ ನಿರ್ಮಾಣವಾಗ್ತಿದೆ.ಲಾಲ್ ಬಾಗ್ ನಲ್ಲಿ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ನಡೆಯುತ್ತೆ. ಇನ್ನೂ  ಪುಷ್ಪ ಪ್ರದರ್ಶನ ವೀಕ್ಷಣೆ ಮಾಡುವುದಕ್ಕೆಂದು ಬೆಂಗಳೂರು ಸೇರಿದಂತೆ ಹೊರರಾಜ್ಯದಿಂದ ಜನಸಾಗರ ಹರಿದುಬರುತ್ತೆ. ಅಷ್ಟೇ ಅಲ್ಲದೆ ಲಾಲ್ ಬಾಗ್ ಗೆ ಪ್ರತಿನಿತ್ಯ ಸಾವಿರಾರು ಜನರು ಬೇಟಿಕೊಡ್ತಾರೆ. ವಾಯುವಿಹಾರಕ್ಕೂ ಬರ್ತಾರೆ . ಆದ್ರೆ ಇಂತಹ ಕೊಂಚ ಸಮಯದಲ್ಲಿ ಜ್ಞಾನಾರ್ಧನಗೆ , ಕೊಂಚ ರಿಲೀಪ್ ಗೆ ಒಂದು ಲೈಬ್ರರಿ ಇದ್ರೆ ಎಷ್ಟು ಚನ್ನಾಗಿರುತ್ತೆ ಎಂದು ಎಲ್ಲಾರಿಗೂ ಅನ್ನಿಸದೇ ಇರುವುದಿಲ್ಲ. ಆದ್ರೆ ಇದೀಗ ಲಾಲ್ ಬಾಗ್ ನಲ್ಲಿ ಜನರ ಅನುಕೂಲಕ್ಕಾಗಿ ಹೈಟೆಕ್ ಗ್ರಂಥಾಲಯ ನಿರ್ಮಾಣಮಾಡಿ ಅರ್ಧಕ್ಕೆ ಕಾಮಗಾರಿ ಕೆಲಸ ನಿಲ್ಲಿಸಿದೆ.
 
ಡಾ. ಎಂ ಎಚ್ ಮರಿಗೌಡ ಗ್ರಂಥಾಲಯ ಎಂಬ ಹೆಸರಲ್ಲಿ ಲೈಬ್ರರಿ ಕಾಮಗಾರಿ ನಡೆಯುತ್ತಿದ್ದು, ಸುಮಾರು ಮೂರು ವರ್ಷದಿಂದ ನಡೆಯುತ್ತಿರುವ ಕಟ್ಟಡ ಕಾಮಗಾರಿ ಕೆಲಸ ಇನ್ನೂ ಸಾಗುತ್ತಲ್ಲೇ ಇದೆ. ಲೈಬ್ರರಿಯಲ್ಲಿ ಹಳೆಕಾಲದ ಪುಸ್ತಕ ಸೇರಿದಂತೆ ನ್ಯೂಸ್ ಪೇಪರ್ ನ್ನ ಕೂಡ ಪ್ರತಿನಿತ್ಯ ಜನರ ಅನುಕೂಲಕ್ಕಾಗಿ ಇಡುವ ವ್ಯವಸ್ಥೆ ಮಾಡಿದೆ. ಗ್ರಂಥಾಲಯಕ್ಕಾಗಿ ಸಾವಿರಾರು ಕೋಟಿ ಖರ್ಚುಮಾಡಿ ಕಟ್ಟಡ ಕಾಮಗಾರಿ ಮಾಡುತ್ತಿದ್ರು . ಇನ್ನೂ ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನೂ ಇದೇ ವಿಷಯವಾಗಿ ಜನರು ಹೇಳಿದರು. ಒಟ್ನಲಿ‌ ಲಾಲ್ ಬಾಗ್ ನಲ್ಲಿ ಗ್ರಂಥಾಲಯ ಕೆಲಸ ಯಾವಾಗ ಮುಗಿಯುತ್ತೋ? ನಾವು ಯಾವಾಗ ಗ್ರಂಥಾಲಯದಲ್ಲಿ ಕುಂತ್ತು ಓದಿತ್ತಿವೋ ಅನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ...
k

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳನ್ನ ಪತ್ತೆ ಮಾಡಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಸೂಚನೆ