ಸಿಲಿಕಾನ್ ಸಿಟಿಯಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ತನಿಖೆಯನ್ನ ಸಿಸಿಬಿ ಚರುಕುಗೊಳಿಸಿದೆ. ಇಗಾಗ್ಲೆ ಬಂಧಿತ ಹಾಗೂ ಅವರ ಕುಟುಂಬದ ನಲವತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆ ಗಳ ವಿವಿರವನ್ನ ಸಿಸಿಬಿ ಪಡೆದುಕೊಂಡಿದೆ. ಸಿಸಿಬಿ ತನಿಖೆಯಲ್ಲಿ ಬೆಚ್ಚಿ ಬೀಳೋ ಸಂಗತಿ ಹೊರಬಿದ್ದಿದ್ದು, ಸಣ್ಣ ಪುಟ್ಟ ಕೂಲಿ ಕೆಲಸ ಮಾಡ್ತಿದ್ದ ಶಂಕಿತರ ಖಾತೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ. ವಿದೇಶಿ ಖಾತೆಗಳಿಂದ ಸಂದಾಯವಾಗಿದ್ದು ಐವರು ಶಂಕಿತ ಖಾತೆಗಳಿಂದ ಸರಿ ಸುಮಾರು 1.25ಕೋಟಿಗೂ ಅಧಿಕಮೊತ್ತದ ಹಣ ಟ್ರಾನ್ಸಾಕ್ಷನ್ ಆಗಿದೆ. ವಿದೇಶದಲ್ಲಿ ಕೊಳಿತು ಜುನೈದ್ ತನಗೆ ಬೇಕಾದ ಕೆಲಸ ಮಾಡಿಸಲು ಶಂಕಿತ ಸುಹೈಲ್, ತಬ್ರೇಜ್ , ರಬ್ಬಾನಿ, ಮುದಾಸಿರ್ ಹಾಗೂ ಉಮರ್ ಖಾತೆಗಳಿಗೆ ಹಣ ಹಾಕಿರೋದು ಕಂಡು ಬಂದಿದೆ. ಇನ್ನೂ ಮುಖ್ಯ ಸಂಗತಿ ಎಂದ್ರೆ ಶಂಕಿತರ ಖಾತೆಯಿಂದ ಲಕ್ಷಾಂತರ ಹಣ ಮೂರನೇ ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆಯಾಗಿದೆ. ಇನ್ನೂ ಈ ಮೂರನೇ ವ್ಯಕ್ತಿಗಳ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳು ಕಲೆ ಹಾಕ್ತಿದ್ದಾರೆ.
ಇನ್ನೂ ಸಂಪೂರ್ಣ ಹಣ ವಿದೇಶಿ ಅಕೌಂಟ್ ನಿಂದ ವರ್ಗಾವಣೆಯಾಗಿದೆ.ಸಿಸಿಬಿ ಅಧಿಕಾರಿಗಳಿಗೆ ಕೇವಲ ಅಕೌಂಟ್ ನಂಬರ್ ಮಾತ್ರ ಲಭಿಸಿದೆ. ಈ ಅಕೌಂಟ್ ಡಿಟೈಲ್ ಪಡೆಯಲು ಇಂಟರ್ ಪೋಲ್ ಅಧಿಕಾರಿಗಳ ಸಹಾಯ ಅನಿವಾರ್ಯವಾಗಿದ್ದು.ಕೇಂದ್ರ ತನಿಖಾ ಸಂಸ್ಥೆಗಳಮುಖೇನ ಇಂಟರ್ ಪೋಲ್ ನಿಂದ ವಿದೇಶಿ ಖಾತೆ ವಿವರ ಪಡೆಯಲು ಸಿಸಿಬಿ ಸಿದ್ಧತೆ ನಡೆಸಿದೆ