Select Your Language

Notifications

webdunia
webdunia
webdunia
webdunia

ಪತ್ನಿ ಅನೈತಿಕ ಸಂಬಂಧ ಕೆ ರೋಸಿ ಹೋಗಿದ್ದ ಪತಿರಾಯ…!

The husband who went to Rosie for his wife's immoral relationship
bangalore , ಗುರುವಾರ, 27 ಜುಲೈ 2023 (18:46 IST)
ಟ್ರ್ಯಾವೆಲ್ಸ್ ಹಾಗೂ ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿರುವ ಶಂಕರ್ ಕಳೆದ 13 ವರ್ಷಗಳ ಹಿಂದೆ ಗೀತಾಳನ್ನ ವಿವಾಹವಾಗಿದ್ದ.. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಗಂಡು ಒಂದು ಹೆಣ್ಣು ಮಗು ಇತ್ತು.. ಆದ್ರೆ ಕೆಲ ದಿನಗಳಿಂದ ಹೆಂಡತಿ ಮೇಲೆ ಪತಿ ಅನುಮಾನ ಪಟ್ಟಿದ್ದ.ಪತ್ನಿ ಗೀತಾ ಮೇಲೆ ಪತಿ ಅನುಮಾನ ಪಟ್ಟಿದ್ದ.. ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇರೋದು ಧೃಡವಾಗಿತ್ತು.. ಆದರೆ ಪತಿ ಶಂಕರ್ ತನ್ನ ಹೆಂಡತಿಗೆ ಒಂದೆರಡು ಬಾರೀ ಬುದ್ಧಿ ಹೇಳಿದ್ದ.. ಆದರೂ ಗಂಡನ ಮಾತಿಗೆ ಕ್ಯಾರೆ ಎನ್ನದೇ ತನ್ನ ವರಸೆ ಮುಂದುವರಿಸಿದ್ದಳು.. ಅಷ್ಟೇ ಅಲ್ಲದೇ ಪ್ರಿಯಕರನ ಜೊತೆ ಇರೋ ವಿಡಿಯೋ ಗಂಡನಿಗೆ ಕಳುಹಿಸಿ ಆತನ ನೆಮ್ಮದಿ ಕಿತ್ತುಕೊಂಡಿದ್ಲು.

ಇದೇ ವಿಚಾರಕ್ಕೆ ಕಳೆದ ಒಂದು ತಿಂಗಳಿನಿಂದ ಪತಿ-ಪತ್ನಿ ನಡುವೆ ಗಲಾಟೆ ಜೋರಾಗಿದೆ.. ಅಷ್ಟೇ ಅಲ್ಲ ಪತ್ನಿ ಪ್ರಿಯಕರ ಬಂದು ಶಂಕರ್ ಗೆ ಆವಾಜ್ ಹಾಕಿ ಕೊಲೆ ಬೆದರಿಕೆ ಕೂಡ ಹಾಕಿದ್ನಂತೆ.. ಇದೇ ವಿಚಾರಕ್ಕೆ ನಿನ್ನೆ ಇಬ್ಬರ ಮಧ್ಯೆ ಗಲಾಟೆ ಆಗಿದೆ. ಈ ವೇಳೆ ಕೋಪಗೊಂಡು ಪತ್ನಿಯ ಮೇಲೆ ಆಯುಧಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದ. ಬಳಿಕ ಶವವನ್ನ ಸೋಫಾ ಮೇಲೆ ಇಟ್ಟು ಹೊರಟುಹೋಗಿದ್ದ.ಹೊರಬಂದವನೇ ಪತ್ನಿಯನ್ನ ಕೊಲೆ ಮಾಡಿರುವ ವಿಚಾರವನ್ನ ಅತ್ತೆಗೆ ಕರೆ ಮಾಡಿ ತಿಳಿಸಿದ್ದಾನೆ. ಅಷ್ಟೇ ಅಲ್ಲ ಸಂಬಂಧಿಕರಿಗೂ ತಿಳಿಸಿ, ಮರ್ಯಾದೆಗೆ ಅಂಜಿ ಕೊಲೆಮಾಡ್ಬಿಟ್ಟೆ ಅಂದಿದ್ದ.. ತಕ್ಷಣ ಚಂದ್ರಾಲೇಔಟ್ ಪೊಲೀಸ್ರು ಆರೋಪಿಯನು ಬಂಧಿಸಿ ಸ್ಟೇಷನ್ ಗೆ ಕರ್ಕೊಂಡ್ ಬಂದಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟ್ ಮೂಲಕ ಗೃಹ ಲಕ್ಷ್ಮಿ ಎಲ್ಲ ಗೊಂದಲಗಳಿಗೆ ತೆರೆ ಎಳೆದ ಸಚಿವೆ