Select Your Language

Notifications

webdunia
webdunia
webdunia
webdunia

ಯೂ-ಟರ್ನ್​ ಹೊಡೆದ ಗೃಹ ಸಚಿವರು

ಯೂ-ಟರ್ನ್​ ಹೊಡೆದ ಗೃಹ ಸಚಿವರು
bangalore , ಬುಧವಾರ, 6 ಏಪ್ರಿಲ್ 2022 (18:48 IST)
ಉರ್ದು ಭಾಷೆಯಲ್ಲಿ ಮಾತನಾಡಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಚಂದ್ರು ಎಂಬ ಯುವಕನನ್ನು ಚೂರಿಯಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದರು. ಆಹಾರ ತರಲು ಬಂದಿದ್ದ ಚಂದ್ರವಿನ ದ್ವಿಚಕ್ರ ವಾಹನ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದಿದೆ. ದುಷ್ಕರ್ಮಿಗಳು ಆತನಿಗೆ ಉರ್ದುವಿನಲ್ಲಿ ಮಾತನಾಡಬೇಕೆಂದು ಧಮ್ಕಿ ಹಾಕಿದರು. ನನಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ ಎಂದು ಬೇಡಿಕೊಂಡರೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಭಾಷೆ ವಿಚಾರವಾಗಿ ಅಲ್ಲ ಬೈಕ್​ ಟಚ್​ ಆದ ಕಾರಣ ಮಾತಿಗೆ ಮಾತು ಬೆಳೆದು ಕೊಲೆ ಮಾಡಲಾಗಿದೆ ಎಂದು ಕಮಿಷನರ್ ಕಮಲ್ ಪಂತ್​​​​​ ತಿಳಿಸಿದ ನಂತರ ಆರಗ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಪ್ರಥಮ ಮಾಹಿತಿ ಕೇಳಿ ಹೇಳಿಕೆ ನೀಡಿದೆ ಕಮಲ್​ ಪಂಥ್​ ಹೇಳಿದ್ದೆ, ಕ್ಷಮಿಸಿ ಎಂದು ಕ್ಷಮೆಯಾಚಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಸರಬರಾಜಿನಲ್ಲಿ ಭಾರಿ ವ್ಯತ್ಯಯ