ವಾರದಲ್ಲಿ ಒಂದು ದಿನ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಚಿಂತನೆ ನಡೆದಿದೆ ರೈತರು ಸಹಕರಿಸಬೇಕು ಎಂದು ಹೇಳುವ ಮೂಲಕ ಅಥಣಿ ಶಾಸಕ ಲಕ್ಷ್ಮಣ್ ಸವದಿ ನದಿ ದಂಡೆಯ ರೈತರಿಗೆ ಶಾಕ್ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ಮಾತನಾಡಿರುವ ಶಾಸಕ ಸವದಿ, ಕೃಷ್ಣಾ ನದಿ ದಂಡೆಯ ವಿದ್ಯುತ್ ಕಡಿತಕ್ಕೆ ಚಿಂತನೆ ನಡೆಸಿರುವ ಶಾಸಕ ಸವದಿ. ಬೇಸಿಗೆ ಸಂದರ್ಭದಲ್ಲಿ ನೀರು ಉಳಿವಿಗಾಗಿ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಿದೆ ಈ ನಿರ್ಧಾರಕ್ಕೆ ರೈತರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.