Select Your Language

Notifications

webdunia
webdunia
webdunia
webdunia

ಸೈಕಲ್ ವಿತರಣೆ ಮಾಡುವ ಯೋಜನೆಗೂ ಎಳ್ಳುನೀರು ಬಿಟ್ಟ ಸರ್ಕಾರ

ಸೈಕಲ್ ವಿತರಣೆ ಮಾಡುವ ಯೋಜನೆಗೂ ಎಳ್ಳುನೀರು ಬಿಟ್ಟ ಸರ್ಕಾರ
bangalore , ಬುಧವಾರ, 6 ಜುಲೈ 2022 (17:16 IST)
ಶಾಲಾ ಸರ್ಕಾರಿ ಮಕ್ಕಳಿಗೆ ಈ ಬಾರಿ ಸೈಕಲ್ , ಶೂಸಾಕ್ಸ್ ವಿತರಣೆ ಮಾಡುವ ಯೋಜನೆಗೆ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಈ ಯೋಜನೆಯನ್ನು ಕೈಬಿಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. 8 ನೇ ತರಗತಿಯ ಸೈಕಲ್, 1 ರಿಂದ 10 ನೇ ತರಗತಿಯವರೆಗೂ ಶೂ, ಸಾಕ್ಸ್ ವಿತರಣೆಗೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗಿದೆ. 2019-20 ನೇ ಸಾಲಿನಿಂದಲೇ ಸೈಕಲ್ ವಿತರಣೆಯನ್ನು ನಿಲ್ಲಿಸಲಾಯಿತು, ಕಳೆದ ಎರಡು ಶೈಕ್ಷಣಿಕ ವರ್ಷದಿಂದ ಶೂ ವಿತರಣೆ ಮಾಡಲಿಲ್ಲ. ಸದ್ಯ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ಲಕ್ಷ ಮಕ್ಕಳು ಶೂ, ಸಾಕ್ಸ್ ನಿಂದ ವಂಚಿತರಾದ್ರೆ. 8 ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 6.15 ಮಕ್ಕಳಿಗೆ ಸೈಕಲ್ ಭಾಗ್ಯ ಇಲ್ಲ ಲಕ್ಷ. ಶೂ,ಸಾಕ್ಸ್ ವಿತರಣೆಗೆ ಪ್ರತಿವರ್ಷ 140 ಕೋಟಿ ವೆಚ್ಚ ಮಾಡಲಾಗ್ತಿತ್ತು, ಕಡಿಮೆ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಅನುದಾನ ಮೀಸಲಿಡಲಾಗಿತ್ತು. ಆದರೆ ಈ ಬಾರಿ ಹಣ ನಿಗದಿ ಮಾಡದೇ ಇರೋದರಿಂದ ಸೈಕಲ್, ಶೂ,ಸಾಕ್ಸ್ ನೀಡುವ ಯೋಜನೆ ಕೈ ಬಿಡಲು ನಿರ್ಧರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರುಣಿ ಎಂದು 54ರ ಅಂಟಿಯನ್ನು ಮದುವೆಯಾದ ವರ!