Publish Date: Tue, 14 Jan 2020 (17:49 IST)
Updated Date: Tue, 14 Jan 2020 (17:51 IST)
ಉಬರ್ ಚಾಲಕನೊಬ್ಬ ಮದ್ಯದ ನಶೆಯಲ್ಲಿದ್ದ ಹುಡುಗಿಯೊಬ್ಬಳ ಮೇಲೆ ಬಲತ್ಕಾರ ಮಾಡಿರೋ ಆರೋಪ ಕೇಳಿಬಂದಿದೆ.
ಪಾರ್ಟಿಗೆ ಹೋಗಿದ್ದ ಯುವತಿ ಮದ್ಯದ ನಶೆಯಲ್ಲಿಯೇ ಉಬರ್ ಕ್ಯಾಬ್ ಬುಕ್ ಮಾಡಿದ್ದಾಳೆ. ಕಾರ್ ಬಂದಾಗ ಅದರಲ್ಲಿ ಮಲಗಿದ್ದಾಳೆ. ಆದರೆ ಆಕೆ ಎಚ್ಚರವಾದಾಗ ಕಾರು ಚಾಲಕ ಅವಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ.
ಹೀಗಾಗಿ ಉಬರ್ ನ ಡ್ರೈವರ್ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಆದರೆ ಆರೋಪವನ್ನು ತಳ್ಳಿಹಾಕಿರೋ ಚಾಲಕ ತಾನು ಮಹಿಳೆಯ ಒಪ್ಪಿಗೆ ಪಡೆದುಕೊಂಡೇ ಲೈಂಗಿಕ ಕ್ರಿಯೆ ನಡೆಸಿರೋದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಕ್ಯಾಲಿಫೋರ್ನಿಯಾದ ಫೋಂಟಾನಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ಕ್ಯಾಬ್ ಚಾಲಕ ಅಲೋನ್ಸೋ ಕ್ಯಾಲೆ ಎಂಬಾತನನ್ನು ಬಂಧಿಸಿದ್ದಾರೆ.