ಪಾಗಲ್ ಟೆಕ್ಕಿಯೊಬ್ಬ ಹುಡುಗಿಗಾಗಿ ಬೇಸತ್ತು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
	 
	ಆತ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಹೆಸರು ನಿಖಿಲ್ ಗೌಡ, ವಯಸ್ಸು 25. ಮಗ ವಯಸ್ಸಿಗೆ ಬಂದಿದ್ದಾನಂತೆ ಅಂತ ಮನೆಮಂದಿ ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿದ್ದರು. 
	ಆದರೆ ಯಾವ ಕನ್ಯೆಯೂ ನಿಖಿಲ್ ಗೌಡ್ ಗೆ ಸೆಟ್ ಆಗ್ತಿರಲಿಲ್ವಂತೆ. ಹೀಗಾಗಿ ಮದುವೆ ಆಗೋಕೆ ಹುಡುಗಿನೇ ಸಿಕ್ತಿಲ್ಲ ಅನ್ನೋ ವಿಷಯವನ್ನೇ ನಿಖಿಲ್ ಮನಸ್ಸಿಗೆ ಹಚ್ಚಿಕೊಂಡಿದ್ದನಂತೆ. 
	ಹುಡುಗಿ ವಿಷಯಕ್ಕಾಗಿಯೇ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಂಧ್ರ ಪ್ರದೇಶದ ರಾಮಂತಪುರದಲ್ಲಿ ಘಟನೆ ನಡೆದಿದೆ.