ರಾಜ್ಯದ ಪ್ರಖ್ಯಾತ ತೋಟವೊಂದು ಸುಂದರ ಪಾರ್ಕ್ ಆಗಿ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗುತ್ತಿದೆ.
ಚಿತ್ರದುರ್ಗದ ಚಂದ್ರವಳ್ಳಿ ತೋಟದಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ವಾಕಿಂಗ್ ಸ್ಟಿಪ್ ಮತ್ತು ಪಾರ್ಕ್ ನಿರ್ಮಿಸುವ ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಲೋಕಸಭಾ ಸಂಸದ ನಾರಾಯಣ ಸ್ವಾಮಿ ಹೇಳಿದ್ದಾರೆ.
ಚಂದ್ರವಳ್ಳಿಗೆ ಹೋಗುವ ರಸ್ತೆಯನ್ನು ಡಬ್ಬಲ್ ರಸ್ತೆಯನ್ನಾಗಿ ನೂತನವಾಗಿ ನಿರ್ಮಿಸಲಾಗುವುದು.
ರಸ್ತೆ ನಿರ್ಮಾಣಕ್ಕೆ ಬೇಕಾಗುವ 38 ಎಕರೆ ಜಾಗ ಸರ್ವೇ ಕೆಲಸ ಕಲವೇ ದಿನಗಳಲ್ಲಿ ಮುಗಿಯಲಿದೆ. ಅತಿಕ್ರಮಣಕಾರರಿಗೆ ಆಗಲೇ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.
ಚಂದ್ರವಳ್ಳಿ ಕೆರೆಯ ಹಿಂಭಾಗದಲ್ಲಿ 19 ಎಕರೆ ಜಾಗ ಸರಕಾರದ್ದು. ಅದರಲ್ಲಿ ವಾಕಿಂಗ್ ಪಾತ್ ಒಳಗೊಂಡ ಪಾರ್ಕ ಅಭಿವೃದ್ದಿ ಪಡಿಸಲಾಗುವುದು ಎಂದಿದ್ದಾರೆ.