ಬಿಜೆಪಿ ಪಕ್ಷದಲ್ಲಿ ಸಂಸ್ಥಾನಗಳಾಗಿವೆ ಎಂದ ಮಾಜಿ ಸಚಿವ

ಬುಧವಾರ, 7 ನವೆಂಬರ್ 2018 (14:33 IST)
ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯಲ್ಲಿ ಸಂಸ್ಥಾನಗಳಾಗಿವೆ. ಹೀಗಾಗಿ ಸೋಲುಂಟಾಗಿದೆ ಎಂದಿದ್ದಾರೆ.

ತುಮಕೂರಿನಲ್ಲಿ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದು, ಬಿಜೆಪಿ ಪಕ್ಷದಲ್ಲಿ  ಸಂಸ್ಥಾನಗಳಾಗಿವೆ.
ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಸಂಸ್ಥಾನಗಳಾಗಿವೆ. ಈ ಹಿಂದೆ ಬಿಜೆಪಿ ಪಕ್ಷ ಕಾರ್ಯಕರ್ತರ ಸಂಸ್ಥಾನವಾಗಿತ್ತು.
 ಬಿಜೆಪಿ ಪಕ್ಷದಲ್ಲಿ 1 ಕೋಟಿ ಸದಸ್ಯತ್ವ ಇದೆ. ಆದರೂ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಇಕ್ಕಟ್ಟಾಗಿದೆ ಎಂದಿದ್ದಾರೆ.  

ಹಿಂದೆ ಕಾರ್ಯಕರ್ತರೇ ಲೀಡರ್ ಆಗಿದ್ದೆವು. ಬಿಜೆಪಿ ಪಕ್ಷ ಚಾಮರಾಜ ನಗರದಿಂದ ಬಳ್ಳಾರಿ ವರೆಗೆ ಕಾರ್ಯಕರ್ತರನ್ನ ನಿರ್ಲಕ್ಷ ಮಾಡಿದೆ. ಇದು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾಜಿ ಸಚಿವ ಓಂಪ್ರಕಾಶ್ ಕಣಗಲಿ ನಿಧನ