Publish Date: Tue, 07 Jul 2020 (20:24 IST)
Updated Date: Tue, 07 Jul 2020 (20:25 IST)
ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದಿದೆ. ಅದರ ಬೆನ್ನಲ್ಲೆ ಇದೀಗ ಪ್ರಥಮ ಪಿಯು ಪೂರಕ ಪರೀಕ್ಷೆ ಜುಲೈ 16 ರಿಂದ ಶುರುವಾಗಲಿದೆ.
ಜುಲೈ 16 ರಿಂದ 27 ರವರೆಗೆ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಸಂಬಂಧಿಸಿದ ಕಾಲೇಜ್ ವ್ಯಾಪ್ತಿಯಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಮಾರ್ಗ ಸೂಚಿ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಿದೆ.
ದ್ವಿತೀಯ ಪಿಯು ಪೂರಕ ಪರೀಕ್ಷೆ ನಡೆಸುವ ಮಾದರಿಯಲ್ಲಿಯೇ ಪ್ರಥಮ ಪಿಯು ಪೂರಕ ಪರೀಕ್ಷೆ ನಡೆಯಲಿವೆ.