ಬೆಂಗಳೂರು : ಬುಧವಾರ ಬೆಂಗಳೂರಿಗೆ ಚಾಲಕರಹಿತ ಮೆಟ್ರೋ ರೈಲಿನ ಬೋಗಿಗಳು ಚೀನಾದಲ್ಲಿ ನಿರ್ಮಾಣಗೊಂಡು ಬಂದು ತಲುಪಿದೆ. ಬೆಂಗಳೂರಿನ ಹೆಬ್ಬಗೋಡಿ ಡಿಪೋದಲ್ಲಿ ಬೋಗಿಗಳನ್ನು ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಈ ಬೋಗಿಗಳನ್ನು ಅಳವಡಿಸಲಾಗುತ್ತದೆ. ಆರ್.ವಿ .ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರ ನಿಲ್ದಾಣದವರೆಗೂ ಹಳದಿ ಮಾರ್ಗ ಕಾರ್ಯ ನಿರ್ವಹಿಸಲಿದ್ದು, ಒಟ್ಟಾರೆ 18.81 ಕಿಮೀ ದೂರವನ್ನು ಕ್ರಮಿಸಲಿದೆ.ಚೀನಾದಾ ಶಾಂಘಾಯ್ ನಲ್ಲಿ ನಿರ್ಮಿಸಲಾಗಿರುವ ಈ ಬೋಗಿಗಳನ್ನು ಹಡಗಿನ ಮೂಲಕ ಚೆನ್ನೈಗೆ ರವಾನಿಸಲಾಗಿತ್ತು ಅಲ್ಲಿಂದ ಬೃಹತ್ ಕಂಟೇನರ್ ಗಳ ಮೂಲಕ ಬೆಂಗಳೂರಿಗೆ ತಲುಪಿಸಲಾಗಿದೆ.