Select Your Language

Notifications

webdunia
webdunia
webdunia
webdunia

ಬಿಜೆಪಿ ಮುಖಂಡನ ಮಗನೆಂದು ಯುವತಿಯ ಮೇಲೆ ಅತ್ಯಾಚಾರ

ಬಿಜೆಪಿ ಮುಖಂಡನ ಮಗನೆಂದು ಯುವತಿಯ ಮೇಲೆ ಅತ್ಯಾಚಾರ
ಬೆಳಗಾವಿ , ಮಂಗಳವಾರ, 18 ಏಪ್ರಿಲ್ 2017 (15:28 IST)
ಬಿಜೆಪಿ ಮುಖಂಡನ ಮಗನೆಂದು ಸುಳ್ಳು ಹೇಳಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಆರೋಪಿ ಸಂಜೀವ್, ಯುವತಿಗೆ ಪ್ರೀತಿಸುವ ನಾಟಕವಾಡಿ ಅತ್ಯಾಚಾರವೆಸಗಿದ್ದಲ್ಲದೇ ಅದರ ವಿಡಿಯೋ ಮಾಡಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿ ವಂಚಿಸಿದ್ದಾನೆ ಎಂದು ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ್ದಾಳೆ.
 
ಇದೇ ರೀತಿ ಐದಾರು ಯುವತಿಯರ ಮೇಲೆ ಕೂಡಾ ಆರೋಪಿ ಸಂಜೀವ್ ಅತ್ಯಾಚಾರವೆಸಗಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಕೊಟ್ಟರೆ ಲೈವ್ ಸೆಕ್ಸ್ ತೋರಿಸುತ್ತಾರಂತೆ: ಶಾಕಿಂಗ್ ನ್ಯೂಸ್ ಬಹಿರಂಗ