Publish Date: Sat, 07 May 2022 (19:38 IST)
Updated Date: Sat, 07 May 2022 (19:41 IST)
ಸಿಎಂ ಆಗಲು 2500 ಕೋಟಿ ಬೇಡಿಕೆ ಇಟ್ಟಿದ್ರು ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ದೆಹಲಿಯವರು ಮುಖ್ಯಮಂತ್ರಿ ಮಾಡಲು 2500 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಮಂತ್ರಿ ಆಗಲು 100 ಕೋಟಿ ಕೊಡಬೇಕು. ಸಿಎಂ ಸ್ಥಾನದ ಆಕಾಂಕ್ಷಿ ಆಗಿರೋ ಯತ್ನಾಳ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು. ಯಾರು ಹಣ ಕೇಳಿದ್ರು..? ಮಾಜಿ ಸಿಎಂ ಯಡಿಯೂರಪ್ಪ ಎಷ್ಟು ಕೊಟ್ಟು ಸಿಎಂ ಆಗಿದ್ರು. ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಹೊರ ಬರಲಿದೆ ಎಂದು ಹೇಳಿದರು. ಯತ್ನಾಳ್ ಹೇಳಿಕೆಯಲ್ಲಿ ಸತ್ಯ ಇದೆ ಎಂದು ನಾನು ನಂಬಿದ್ದೇನೆ. ಬೊಮ್ಮಾಯಿ ಎಷ್ಟು ಹಣ ಕೊಟ್ಟು ಸಿಎಂ ಆದ್ರು..? ಇದೆಲ್ಲಾ ದೇಶದ ಜನರಿಗೆ ಗೊತ್ತಾಗಬೇಕು. ಇಂಥ ಭ್ರಷ್ಟ ಸರ್ಕಾರವನ್ನ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.