Publish Date: Mon, 11 Jul 2022 (20:04 IST)
Updated Date: Mon, 11 Jul 2022 (20:13 IST)
ಮಲಗಿದ ತನ್ನ ಮರಿ ಮನೆ ಎದ್ದೇಳದೆ ಇದ್ದಾಗ ತಾಯಿ ಆನೆಯು ಮೃಗಾಲಯದ ಸಿಬ್ಬಂದಿಯ ನೆರವು ಕೋರಿದ ಗಮನ ಸೆಳೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃಗಾಲಯದಲ್ಲಿ ತಾಯಿ ಆನೆಯೊಂದು ಮಲಗಿದ್ದ ತನ್ನ ಕರುವನ್ನು ಎಬ್ಬಿಸಲು ಸಹಾಯ ಕೋರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 12.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ತಾಯಿ ಆನೆಯು ತನ್ನ ಮರಿ ಆನೆ ಬರುತ್ತದೆ. ಆದರೆ, ಹುಲ್ಲಿನಲ್ಲಿ ಮಲಗಿದ್ದ ಮರಿ ಆನೆ, ತಾಯಿ ಬಂದರೂ ಎದ್ದೇಳುವುದಿಲ್ಲ. ತನ್ನ ಮರಿಯನ್ನು ಎಬ್ಬಿಸಲು ನಿರಂತರವಾಗಿ ಪ್ರಯತ್ನಿಸಲು ಅದು ಎಚ್ಚರವಾಗಲ್ಲ. ಹೀಗಾಗಿ ತಾಯಿ ಆನೆ ಕೊನೆಗೆ ಮೃಗಾಲಯದ ಸಿಬ್ಬಂದಿ ಬಳಿಗೆ ತೆರಳುವುದು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ, ಸಿಬ್ಬಂದಿ ಬಂದು ಮರಿಯನ್ನು ಹಿಂಬದಿಯಿಂದ ಕೆಲ ಸೆಕೆಂಡ್ಗಳು ಕಾಲ ಅಲುಗಾಡಿಸಿದಾಗ ಎಚ್ಚರವಾಗುತ್ತದೆ. ನಂತರ ಆ ಮರಿ ಆನೆಯು ತನ್ನ ಕಣ್ಣುಗಳನ್ನು ತೆರೆದು ತಾಯಿಯ ಬಳಿಗೆ ಓಡುತ್ತಿದೆ.