Webdunia - Bharat's app for daily news and videos

Install App

ಡ್ರಮ್ ನಲ್ಲಿತ್ತು ಶವ..ಪ್ರಕರಣ ಬೇಧಿಸಿದ ರೈಲ್ವೇ ಪೊಲೀಸರು..!

Webdunia
ಗುರುವಾರ, 16 ಮಾರ್ಚ್ 2023 (18:44 IST)
ಅದು ಎಂಟು ಜನರ ಗ್ಯಾಂಗ್.ಮಹಿಳೆಯನ್ನ ಪಕ್ಕಾ ಪ್ಲಾನ್ ಮಾಡಿ ಹತ್ಯೆ ಮಾಡಿದ್ರು.ಕೈ ಕಾಲು ಮುರಿದು‌ಡ್ರಮ್ ನಲ್ಲಿ ಹಾಕಿದ್ರು.ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಮಹಿಳೆಯ ಶವ ಇದ್ದ ಪ್ರಕರಣವನ್ನು ರೈಲ್ವೇ ಪೊಲೀಸರು ಬೇಧಿಸಿದ್ದಾರೆ.ಡ್ರಮ್ ಮೇಲಿದ್ದ ಸ್ಟಿಕ್ಕರ ಆರೋಪಿಗಳ ಸುಳಿವು ಕೊಟ್ಟಿತ್ತು.ನಂತರ ಹೊರಬಿದ್ದಿದ್ದೇ ನೋಡಿ ಕೌಟುಂಬಿಕ ಕಲಹದ ಕಹಾನಿ.ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿದ್ದ ಡ್ರಮ್ ಒಂದು ಇಟ್ಟಲ್ಲಿಯೇ ಇತ್ತು.ಯಾರು ಅತ್ತ ಸುಳಿಯಲೇ ಇಲ್ಲ.ಆರ್ ಪಿ ಎಫ್ ಅವರಿಗೆ ಅನುಮಾನ ಮೂಡಿದ್ದು ಬಂದು ಪರಿಶೀಲಿಸಿದ್ದಾರೆ.ನೋಡ್ತಿದ್ದಂತೆ ಶಾಕ್ ಯಾಕಂದ್ರೆ ಅದೇ ಡ್ರಮ್ ಒಳಗೆ ಮಹಿಳೆಯೊಬ್ಬಳ ಮೃತದೇಹವಿತ್ತು.ಮುಖ ಕಪ್ಪಾಗಿತ್ತು.ಕೈ,ಕಾಲು ಮುರಿದು ಹಾಕಲಾಗಿತ್ತು.ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ರೈಲ್ವೇ ಪೊಲೀಸರು ಮಹಿಳೆಯ ಗುರುತು ಪತ್ತೆಗೆ ಮುಂದಾಗಿದ್ದಾರೆ.ಸದ್ಯ ಮೃತ ಮಹಿಳೆ ತಮನ್ನಾ ಅನ್ನೋದು ಗೊತ್ತಾಗಿದ್ದು..ಆರೋಪಿಗಳನ್ನೂ ಪತ್ತೆ ಹಚ್ಚಿದ್ದಾರೆ.

ಹೀಗೆ ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬರ್ತಿದ್ದಾರಲ್ಲ ಈ ಮೂವರೇ ನೋಡಿ ಹಂತಕರು..ಹೆಸರು ಕಮಾಲ್ ,ತನ್ವೀರ್ ಮತ್ತು ಶಾಕೀಬ್.ಇವ್ರ ಜೊತೆಗೆ ಮತ್ತೆ ಐವರಾದ ನವಾಬ್,ಜಮಾಲ್,ಮಜರ್,ಅಸ್ಸಾಬ್,ಸಬೂಲ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದು ಪರಾರಿಯಾಗಿದ್ದಾರೆ.ಇವ್ರೆಲ್ಲಾ ಬಿಹಾರ ಮೂಲದವರು.ಬೆಂಗಳೂರಲ್ಲಿ ಬಂದು ಮಾರ್ಕೆಟ್ ನ ತರಕಾರಿ ಮಂಡಿಯಲ್ಲಿ ಕೆಲಸ ಮಾಡಿಕೊಂಡಿದ್ದವರು.ಸದ್ಯ ಅವರ ಪತ್ತೆಗೂ ಬಲೆ ಬೀಸಲಾಗಿದೆ.ಹಾಗಾದ್ರೆ ಓರ್ವ ಮಹಿಳೆಯನ್ನ ಈ ಎಂಟು ಜನರ ತಂಡ ಕೊಲೆ ಮಾಡಿದ್ಯಾಕೆ..? ಮೃತದೇಹವನ್ನು ಡ್ರಮ್ ನಲ್ಲಿ ತಂದಿಟ್ಟಿದ್ಯಾಕೆ..?ಅದೇ ನೋಡಿ ಇಂಟರಸ್ಟಿಂಗ್.

ಪೊಲೀಸರ ತನಿಖೆ ವೇಳೆ ಕೌಟುಂಬಿಕ ಕಲಹಕ್ಕೆ ಮಹಿಳೆ ಕೊಲೆಯಾಗಗಿದೆ ಅನ್ನೋದು ಗೊತ್ತಾಗಿದೆ.ಆ ಕತೆಯನ್ನೇ ಹೇಳ್ತಿವಿ ಕೇಳಿ.ತಮನ್ನಾ 2022 ರ ಏಪ್ರಿಲ್ ನಲ್ಲಿ ಅಫ್ರೋಜ್ ಎಂಬಾತನನ್ನ ಮದುವೆ ಆಗಿದ್ಳು.ಅಫ್ರೋಜ್ ವಿಶೇಷ ಚೇತನನಾಗಿದ್ದರಿಂದ ಆತನ ಜೊತೆ ಡಿವೋರ್ಸ್ ಪಡೆದು ಇಂತಿಕಾಬ್ ಎಂಬಾತನ ಜೊತೆಗೆ ಮದುವೆಯಾಗಿದ್ಳು.ಇಂತಿಕಾಬ್ ಜೊತೆಗೆ ಬೆಂಗಳೂರಿಗೆ ಆಗಮಸಿದ್ದ ತಮನ್ನಾ ಜಿಗಣಿಯಲ್ಲಿ ವಾಸಮಾಡಿಕೊಂಡಿದ್ರು.ಈ ನಡುವೆ ತಮನ್ನಾ ಮೊದಲ ಪತಿ ಅಫ್ರೋಜ್ ಬೇರಾರು ಅಲ್ಲಾ ಇದೇ ಇಂತಿಕಾಬ್ ದೊಡ್ಡಪ್ಪನ ಮಗನೇ ಆಗಿದ್ದ.ಕೊಲೆಯ ಪ್ರಮುಖ ಆರೋಪಿ ನವಾಬ್ ತಮನ್ನಾ ಎರಡನೇ ಪತಿ ಇಂತಿಕಾಬ್ ಸಹೋದರನಾಗಿದ್ದ.ಅಫ್ರೋಜ್ ಡಿವೋರ್ಸ್ ನೀಡಿದ್ದರಿಂದ ಕುಪಿತನಾಗಿದ್ದ ನವಾಬ್ ನಮ್ಮ ಇಡೀ ಕುಟುಂಬವನ್ನೇ ಹಾಳು ಮಾಡ್ತಿದ್ದಾಳೆಂದು ಕೊಲೆಗೆ ಸ್ಕೆಚ್ ಹಾಕಿಕೊಂಡಿದ್ದ.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments