Select Your Language

Notifications

webdunia
webdunia
webdunia
webdunia

ಯಡಿಯೂರಪ್ಪನವರ ಬಗ್ಗೆ ಮಾತಾಡಿದರೆ ನಮ್ಮ ಮುಖವನ್ನು ಮೇಲೆ ಮಾಡಿ ನಾವು ಉಗಿದಂತೆ..!

ಯಡಿಯೂರಪ್ಪನವರ ಬಗ್ಗೆ ಮಾತಾಡಿದರೆ ನಮ್ಮ ಮುಖವನ್ನು ಮೇಲೆ ಮಾಡಿ ನಾವು ಉಗಿದಂತೆ..!
bangalore , ಗುರುವಾರ, 16 ಮಾರ್ಚ್ 2023 (18:32 IST)
ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಸಚಿವ ವಿ ಸೋಮಣ್ಣಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಬಿಎಸ್ ಯಡಿಯೂರಪ್ಪ ಕೂಡ ಸೋಮಣ್ಣನವರ ಅಸಮಾಧಾನ ಶಮನಕ್ಕೆ ಮುಂದಾಗಿದ್ದರು. ಇದರ ನಡುವೆ ಸೋಮಣ್ಣ ದೆಹಲಿಗೆ ತೆರಳಿ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದರು. ಈ ಸಂಬಂಧ ಇಂದು ಮಾತನಾಡಿದ ಸೋಮಣ್ಣ ನಮ್ಮ ನಾಯಕರು ಗೊಂದಲ ನಿವಾರಣೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ನಗರದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಸಚಿವ ವಿ. ಸೋಮಣ್ಣ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಅಸಮಾಧಾನದ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ ಎಂದಿದ್ದಾರೆ..... ಯಡಿಯೂರಪ್ಪ ಯಡಿಯೂರಪ್ಪಾನೇ, ಅವರ ಬಗ್ಗೆ ಮಾತಾಡಿದರೆ ನಮ್ಮ ಮುಖವನ್ನು ಮೇಲೆ ಮಾಡಿ ನಾವು ಉಗಿದಂತೆ. ಅದು ನಮಗೆ ಬಂದು ಬೀಳಲಿದೆ..ಒಂದು ಪಕ್ಷದಲ್ಲಿದ್ದಾಗ ಅಲ್ಲಿ ಮುಜುಗರ ತರುವ ಕೆಲಸ ಮಾಡುವವನಲ್ಲ ಎಂದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಅನಿಲ ಸಂಪರ್ಕಿಸುವ ಪೈಪ್ ನಲ್ಲಿ ಸೋರಿಕೆ