Publish Date: Thu, 15 Nov 2018 (16:18 IST)
Updated Date: Thu, 15 Nov 2018 (16:20 IST)
ಸಿಲಿಂಡರ್ ತುಂಬಿದ ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜನ್ನೆಹಕ್ಲು ಸಮೀಪ ಮುಂಡಿಗೆಹಳ್ಳದಲ್ಲಿ ಈ ಘಟನೆ ನಡೆದಿದೆ.
ಬೆಳಗಿನ ಜಾವ ನಡೆದ ಘಟನೆ ಇದಾಗಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
20ಕ್ಕೂ ಹೆಚ್ಚು ಸಿಲಿಂಡರ್ ಇದ್ದು, ಎಲ್ಲವೂ ಸಿಡಿದಿದ್ದರಿಂದ ಚಾಲಕ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪೋಲೀಸ್ ತಂಡ ಹಾಗೂ ಅಗ್ನಿಶಾಮಕದಳ ದೌಡಾಯಿಸಿದೆ.
ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚು ಜಮಾವಣೆಯಾದ್ದರಿಂದ ಕಾರ್ಯಾಚರಣೆಗೆ ಕೊಂಚ ತೊಡಕು ಉಂಟಾಗಿತ್ತು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಂಡಿಯನ್ ಗ್ಯಾಸ್ ಕಂಪನಿಗೆ ಸೇರಿದ ಸಿಲಿಂಡರ್ ಲಾರಿ ಪಲ್ಟಿಯಾಗಿದೆ.