Publish Date: Fri, 14 Jan 2022 (21:00 IST)
Updated Date: Fri, 14 Jan 2022 (21:03 IST)
ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬ ಮನೆ ಮಾಡಿದ್ದು ಸಂಕ್ರಾಂತಿ ಹಬ್ಬಕ್ಕೆ ಕರೋನಾ ಎಳ್ಳುನೀರು ಬಿಟ್ಟಿದ್ದೇ . ಹಬ್ಬದ ಬಿಸಿಯಲ್ಲಿ ಕರೋನಾ ನಿಯಮಾವಳಿಗಳನ್ನು ಉಲ್ಲಂಘಿಸಿ ಕೆ ಆರ್ ಮಾರುಕಟ್ಟೆಯಲ್ಲಿ ಹೂವು , ಹಣ್ಣು ಕೊಳ್ಳಲು ಜನ ಸಮೂಹವೇ ಸೇರಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ಎರಡನೇ ವಾರವೂ ವೀಕೆಂಡ್ ಕರ್ಫ್ಯೂ ಜಾರಿ ಇರಲಿದೆ . ಇಂದು ರಾತ್ರಿ ಹತ್ತು ಗಂಟೆಯಿಂದ ಸೋಮವಾರ ಮುಂಜಾನೆ 5ಗಂಟೆ ವರೆಗೂ ವೀಕೆಂಡ್ ಕರ್ಫ್ಯೂ ಜಾರಿ ಇರುವ ಕಾರಣ ಹೂವು ಹಣ್ಣು ಕೊಳ್ಳಲು ಹಬ್ಬದ ಹೆಸರಿನಲ್ಲಿ ಸಂತೆಯಲ್ಲಿ ಜನಜಂಗುಳಿ ನೆರೆದಿದೆ .
ಮಾಸ್ಕ್ ಸಾಮಾಜಿಕ ಅಂತರ ಎಲ್ಲವನ್ನೂ ಮರೆತು ಕರೋನಾ ಉಲ್ಬಣಕ್ಕೆ ಕಾರಣರಾಗಿದ್ದಾರೆ . ಮಾರುಕಟ್ಟೆ ಯಿಂದ ಕೂಗಳತೆ ದೂರದಲ್ಲಿ ಬಿಬಿಎಂಪಿ ಕಚೇರಿ ಇದ್ದು ಯಾರೊಬ್ಬ ಅಧಿಕಾರಿಗಳೂ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಕರೋನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು ಜನ ಮಾತ್ರ ಇದಾವುದಕ್ಕೂ ಡೋಂಟ್ ಕೇರ್ ಅಂತ ಹೇಳಿ ಹಬ್ಬಕ್ಕೆ ಬೇಕಾದ ವಸ್ತುಗ ಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಒಂದು ಲಕ್ಷ ಕರೋನ ಕೇಸು ದಾಖಲಾದರೂ ಅಚ್ಚರಿ ಪಡುವಂತದ್ದೇನಿಲ್ಲ ಎಂಬುವುದಾಗಿದೆ.