Select Your Language

Notifications

webdunia
webdunia
webdunia
webdunia

ಅತ್ಯಂತ ಕಷ್ಟಕರ ಸಮಯದಲ್ಲಿ ಕೇಂದ್ರ ನಮಗೆ ನೆರವಾಗಬೇಕು: ಡಿಕೆ ಶಿವಕುಮಾರ್‌

DCM DK Shivkumar
Photo Credit X
ಬೆಂಗಳೂರು: ರಾಜ್ಯದಲ್ಲಿ ಬರದಿಂದಾಗಿ ಅತ್ಯಂತ ಕಷ್ಟಕರ ಸಮಯವನ್ನು ಎದುರಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಕನಿಷ್ಠ ಈ ಸಂದರ್ಭದಲ್ಲಾದ್ರೂ ನಮ್ಮೆಲ್ಲರಿಗೆ ನೆರವಾಗಬೇಕು ಎಂದು ಸಿಎಂ ಡಿಕೆ ಶಿವಕುಮಾರ್‌  ಮನವಿ ಮಾಡಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಬೆಂಗಳೂರಿನಲ್ಲಿ  ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಎಲ್ಲಾ ಸಂಸದರ ಉನ್ನತ ಮಟ್ಟದ ಸಭೆ ಕರೆದಿದ್ದೀನಿ. 

ಸಭೆಯಲ್ಲಿ ಬರದ ವಿಚಾರ ಚರ್ಚೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ಇನ್ನೂ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಸುಮಾರು ಏಳು ಅಥವಾ ಎಂಟು ಸಚಿವರು ದೆಹಲಿಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಮುಖ ವಿಚಾರಗಳನ್ನ ಕೇಂದ್ರ ಸರ್ಕಾರದ ಮುಂದಿಡಲು ನಾವು ಬಯಸಿದ್ದೇವೆ. 

ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಏಕೆಂದರೆ ಬರ ಪರಿಸ್ಥಿತಿಯಿಂದ ನಾವು ಅತ್ಯಂತ ಕಷ್ಟಕರ ಸಮಯವನ್ನ ಎದುರಿಸುತ್ತಿದ್ದೇವೆ.

ಇಂತಹ ಕಷ್ಟದ ಸಮಯದಲ್ಲಿದೆ ನಮ್ಮೆಲ್ಲರಿಗೂ ನೆರವಾಗಬೇಕು. ಅದಕ್ಕಾಗಿಯೇ ನಾನು ನಮ್ಮ ಸಂಸದರನ್ನ ಸಭೆಗೆ ಕರೆದಿದ್ದೇನೆ. ನಂತರ ಎಲ್ಲಾ ಪಕ್ಷಗಳ ನಾಯಕರನ್ನೂ ಭೇಟಿ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

Video: ಕುದಿಯುವ ಜ್ವರದಲ್ಲೂ ಟೀಕಾಕಾರರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ