Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ

ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ
ವಿಜಯಪುರ , ಗುರುವಾರ, 6 ಸೆಪ್ಟಂಬರ್ 2018 (14:52 IST)
ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುನೀಲಗೌಡ ಪಾಟೀಲ್ ಮತಗಟ್ಟೆಗಳಿಗೆ ಭೇಟಿ ನೀಡಿದರು. ಸುನೀಲಗೌಡ ಪಾಟೀಲ್, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ.ಪಾಟೀಲ್ ರ ಸಹೋದರರಾಗಿದ್ದಾರೆ.

ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಮತಗಟ್ಟೆಗೆ ಬೆಂಬಲಿಗರೊಂದಿಗೆ ಭೇಟಿ ನೀಡಿದರು. ವಿಜಯಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ, ಜಿಲ್ಲಾ ಪಂಚಾಯತಿ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು, ಇನ್ನಿತರ ಮತದಾರರು,  ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಸೇರಿದಂತೆ ಬೆಂಬಲಿಗರು ಸಾಥ್ ನೀಡಿದರು. 
ಮಾರ್ಗಗಳನ್ನ ಆಯ್ಕೆ ಮಾಡಿಕೊಂಡು ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡುವಂತೆ, ಮತದಾರರ ಮನ ಒಲಿಸುವಂತೆ ಸುನೀಲಗೌಡ ಪಾಟೀಲರಿಂದ ತಮ್ಮ ಬೆಂಬಲಿಗರಿಗೆ ಸೂಚನೆ ನೀಡಲಾಯಿತು.

ಅಭ್ಯರ್ಥಿ ಸುನೀಲಗೌಡ ಪಾಟೀಲ್ ಮಾತನಾಡಿ, ಅವಳಿ ಜಿಲ್ಲೆಯ ಸಚಿವರು, ಹಾಲಿ ಮಾಜಿ ಶಾಸಕರು ಹಾಗೂ ಪಕ್ಷದ ಜನಪ್ರತಿನಿಧಿಗಳು ನನ್ನ ಪರವಾಗಿ ಒಗ್ಗಟ್ಟಾಗಿ ಪ್ರಚಾರ ಕೈಗೊಂಡಿದ್ದಾರೆ. ಇದು ನನ್ನ ಜೀವನದಲ್ಲಿ ಮೊದಲ ಚುನಾವಣೆ.
ಶೇಕಡಾ ಅರವತ್ತೈದರಿಂದ ಎಪ್ಪತ್ತು ಪರ್ಸೆಂಟ್ ಸದಸ್ಯ ಮತದಾರರು ನಮ್ಮ ಪಕ್ಷದವರು. ಅತ್ಯಂತ ಬಹುಮತದಿಂದ ನಾನು ಆರಿಸಿ ಬರುವುದು ನಿಶ್ಚಿತ ಎಂದರು. ಎದುರಾಳಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೂಳಪ್ಪ ಶೆಟಗಾರ ಸಹ ನಮ್ಮವರೇ.
ನಮ್ಮ ಪಕ್ಷದಿಂದ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರೇ ಆಗಿದ್ದರು ಎಂದರು. ಸುನೀಲಗೌಡ ಪಾಟೀಲ್, ಮಾಜಿ ಸಚಿವ, ಹಾಲಿ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಅವರ ಸಹೋದರರಾಗಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಸಾಲ ಮನ್ನಾ: ಮಧ್ಯವರ್ತಿ ಬ್ಯಾಂಕ್ ಗೆ ಬೆಳೆ ಸಾಲದ ಹಣ ಕೊಡಲು ಒತ್ತಾಯ