ದೀಪಾವಳಿ ಹಬ್ಬಕ್ಕೆ ಜನರ ಖರೀದಿ ಭರಾಟೆ ಜೋರಾಗಿದ್ದು,ದರ ಹೆಚ್ಚಳದ ನಡುವೆ ಕೆ ಆರ್ ಮಾರ್ಕೆಟ್ ನಲ್ಲಿ ಜನರ ಖರೀದಿ ಜೋರಾಗಿದೆ.ಹೂ ಹಣ್ಣು ಖರೀದಿಮಾಡಲು ಜನ ಮುಗಿಬಿದ್ದಿದ್ದಾರೆ.
ಹಬ್ಬದ ಹಿನ್ನೆಲೆ ಎಲ್ಲದರ ಬೆಲೆ ಗಗನಕ್ಕೆರಿದೆ.ಕೆ ಆರ್ ಮಾರ್ಕೆಟ್ ನಲ್ಲಿ ಜನವೋ ಜನ ತುಂಬಿದ್ದಾರೆ.ಹೂ ಹಣ್ಣು ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.ಬೆಳಕಿನ ಹಬ್ಬಕ್ಕೆ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ, ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಮಾರುಕಟ್ಟೆಯಲ್ಲಿ ಕಣ್ಣು ಹಾಯಿಸಿದಲ್ಯಾಲ್ಲ ತರಹೇವಾರಿ ವಿನ್ಯಾಸದ ಹಣತೆಗಳು ಜನರನ್ನು ಆಕರ್ಷಿಸುತ್ತಿವೆ .ದೀಪವೊಂದರ ಬೆಲೆ ₹5ರಿಂದ ₹300ವರೆಗಿದೆ ಮಾರಾಟ ಮಾಡಲಾಗುತ್ತಿದೆ.ಕೆ.ಆರ್. ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ಮಲ್ಲೇಶ್ವರ ಮಾರುಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಕೂಡಿದೆ.
ತರಕಾರಿ, ದಿನಸಿ ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿ ಖರೀದಿ ಜೋರಾಗಿದೆ.